ಬಡಗಬೆಳ್ಳೂರು: ಬಡಗಬೆಳ್ಳೂರು ಗ್ರಾಮದ ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮಕೃಷ್ಣ ತಪೋವನ ಆಶ್ರಿತ `ಹಸಿರು ಪ್ರಕೃತಿ’ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ-ಪಡೀಲ್ ಹಾಗೂ ಲಯನ್ಸ್ ಕ್ಲಬ್ ತುಳುನಾಡ್ ಮಂಗಳೂರು ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ಜರುಗಿತು.19vpshibira

ಅತ್ತಾವರ ಕೆಎಂಸಿ ಮತ್ತು ದಂತ ವೈದ್ಯಕೀಯ ಆಸ್ಪತ್ರೆಯ ನುರಿತ ವೈದ್ಯರು ಶಿಬಿರ ನಡೆಸಿಕೊಟ್ಟರು. ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ರಕ್ತ ಪರೀಕ್ಷೆ, ಕಣ್ಣು ಮತ್ತು ದಂತ ಪರೀಕ್ಷೆ, ಸ್ತ್ರೀರೋಗ, ಚರ್ಮರೋಗಕ್ಕಾಗಿ ನೂರಾರು ಮಂದಿ ಪರೀಕ್ಷೆ ನಡೆಸಿಕೊಂಡು ಪ್ರಯೋಜನ ಪಡೆದರು.01

ಲಯನ್ಸ್ ಕ್ಲಬ್ಬಿನ ಪದಾಧಿಕಾರಿ ಉಮಾ ಹೆಗ್ಡೆ ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿದರು.ಅವರು ಸರಳ ಸಮಾರಂಭದಲ್ಲಿ ಮಾತನಾಡುತ್ತ ಸಾಕಷ್ಟು ಜನರು ಪ್ರಯೋಜನ ಪಡೆದಾಗ ಇಂತಹ ಶಿಬಿರಗಳಿಗೆ ಮಹತ್ವ ಬರುತ್ತದೆ. ಇದು ನಿಮ್ಮ ಮನೆ ಬಾಗಿಲಲ್ಲಿ ಸಿಗುವ ಉಚಿತ ವೈದ್ಯಕೀಯ ಸೇವೆ ಎಂದರು.

03

02

04 ವೇದಿಕೆಯಲ್ಲಿ ಉಮಾ ಹೆಗ್ಡೆ ,ವಿಲ್ಸನ್ ದಿವಾಕರ, ಉಮೇಶ್ ಶೆಟ್ಟಿ ಪರಿಮೊಗರು, ವಿದ್ಯಾ ಭಟ್, ರೂಪ ರವಿರಾಜ ಶೆಟ್ಟಿ ಕೆಎಂಸಿಯ ಡಾ. ತೃಷಾ,ದಿಶಾ ಟ್ರಸ್ಟ್‍ನ ನಿರ್ದೇಶಕ ಸಿಲ್ವೆಸ್ಟರ್ ಡಿ”ಸೋಜಾ, ಲತೀಶ್ ಇದ್ದರು. ಬಡಗಬೆಳ್ಳೂರು ಶಶಕಿರಣ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *