ಕೈಕಂಬ: “ಅಂಡರ್-18 ಸಿನಿಯರ್” ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ತಾಲೂಕಿನ ಅಡ್ಡೂರು-ಕಾಂಜಿಲಕೊಡಿ ನಿವಾಸಿ ಮೊಹಮ್ಮದ್ ಅಶ್ರಫ್ ಪ್ರತಿನಿಧಿಸಲಿದ್ದಾರೆ.

ಮೊಹಮ್ಮದ್ ಅಶ್ರಫ್ ಬಂಟ್ವಾಳ ತಾಲೂಕಿನ ಕರಿಯಾಂಗಲ ಗ್ರಾಮ ನಿವಾಸಿ S M ಉಮರ್ ರಬ್ಬಾ ಪುತ್ರ.ಗುರುಪುರ-ಕೈಕಂಬ ರೋಝಾ ಮಿಸ್ಟಿಕಾ ಕಾಲೇಜಿನಲ್ಲಿ 2 P U C ವ್ಯಾಸಂಗ ಮಾಡುತ್ತಿರುವ ಅಶ್ರಫ್, ಇತ್ತೀಚೆಗೆ ಬೆಲ್ಲಾರಿ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ, ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ “ಅಂಡರ್-18 ಸಿನಿಯರ್” ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾಟ ನವ ದೆಹಲಿಲ್ಲಿ ನಡೆಯಲಿದೆ ಎಂದು ಇರ್ಶಾದ್ ಅಡ್ಡೂರು ಪ್ರಕಟನೆಣೆಯಲ್ಲಿ ತಿಳಿಸಿದ್ದಾರೆ.