ಗುರುಪುರ:ಹಿಂದೂ ಎನ್ನುವುದು ಭಾರತ ದೇಶದ ಆತ್ಮವಾಗಿದೆ. ಇದು ಈ ದೇಶದ ರಾಷ್ಟ್ರೀಯತೆಯೇ ಹೊರತು ಕೋಮುವಾದವಲ್ಲ ಎಂದು ಆರ್‍ಎಸ್‍ಎಸ್‍ನ ವಿಭಾಗ ಸಾಮರಸ್ಯ ಸಂಯೋಜಕ್ ಸುರೇಶ್ ಪರ್ಕಳ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಗಂಜಿಮಠ ಸಮೀಪದ ಮಳಲಿ ರಾಮಂಜನೇಯ ಭಜನಾ ಮಂದಿರದಲ್ಲಿ ಆರ್‍ಎಸ್‍ಎಸ್ ವತಿಯಿಂದ ಬೌದ್ಧಿಕ್ ನೀಡಿ ಮಾತನಾಡುತ್ತಿದ್ದರು.17vpRSS
ಪ್ರತಿಯೊಂದು ದೇಶಕ್ಕೂ ಒಂದು ಆತ್ಮವಿದ್ದು, ಅದೇ ರೀತಿ ನಮ್ಮ ದೇಶಕ್ಕೂ ಒಂದು ಆತ್ಮವಿದೆ. ಅದನ್ನೇ ಧರ್ಮ ಎನ್ನುತ್ತಾರೆ. ಹಿಂದೂ ಎನ್ನುವುದು ಈ ದೇಶದ ಆತ್ಮವಾಗಿದೆ. ನಮ್ಮ ಸಮಾಜದಲ್ಲಿರುವ ಲೋಪದೋಷಗಳನ್ನು ಬದಿಗಿಟ್ಟು ನಾವು ಒಗ್ಗೂಡುವುದು ಇಂದು ಅತಿ ಅಗತ್ಯ. ಸಮಾಜದ ದೋಷಗಳನ್ನು ನಮ್ಮ ಧರ್ಮದ ಮೇಲೆ ಹಾಕುವುದು ಸರಿಯಲ್ಲ. ಉದಾಹರಣೆಗೆ ಅಸ್ಪøಷ್ಯತೆಗೆ ಧರ್ಮ ಕಾರಣವಲ್ಲ. ಯಾಕೆಂದರೆ ರಾಮಾಯಣ, ಮಹಾಭಾರತವಾಗಲಿ ಅಥವಾ ಯಾವುದೇ ಧರ್ಮಗ್ರಂಥದಲ್ಲಿ ಜಾತೀಯತೆ, ಅಸ್ಪøಷ್ಯತೆ ಇತ್ಯಾದಿಗಳನ್ನು ಸಮರ್ಥಿಸುವ ಅಂಶಗಳಿಲ್ಲ. ನಮ್ಮ ಅಹಂ ಅನ್ನು ದೂರಗೊಳಿಸುವುದು ಧರ್ಮದ ಸಾರವಾಗಿದೆ. ಆದ್ದರಿಂದ ಹಿಂದೂ ಎನ್ನುವುದು ಹೃದಯದಿಂದ ಬರಬೇಕೇ ಹೊರತು ನಾಟಕದ ಹಿಂದುತ್ವ ಬೇಡ ಎಂದು ಸುರೇಶ್ ಪರ್ಕಳ ಅಭಿಪ್ರಾಯಿಸಿದರು.
ಹಿರಿಯರಾದ ನಿವೃತ ಆರೋಗ್ಯ ಸಹಾಯಕರಾದ ಎ. ಕೃಷ್ಣ ರಾವ್ ಅಧ್ಯಕ್ಷತೆ ವಹಿಸಿ ಮಾತಾಡಿದರು. ಮಧ್ಯಾಹ್ನ ಮಳಲಿ ಮುಳ್ಳಗುಡ್ಡೆಯಿಂದ ಶ್ರೀರಾಮ ಭಜನಾಮಂದಿರದವರೆಗೆ ಪಥಸಂಚಲನ ನಡೆಯಿತು. ಈ ವೇಳೆ ಪವಿತ್ರ ಭಗವಾಧ್ವಜವನ್ನು ಪುಷ್ಪಾರ್ಚನೆಯೊಂದಿಗೆ ಸ್ವಾಗತಿಸಲಾಯಿತು.

By suddi9

Leave a Reply

Your email address will not be published. Required fields are marked *