ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ ಕೈಕಂಬ ಇದರ ಪ್ರತಿಭಾ ಪುರಸ್ಕಾರ ವಾರ್ಷಿಕೋತ್ಸವ ಮತ್ತು ಕ್ರಿಸ್ಮಸ್ ಆಚರಣೆ ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಕ ರಕ್ಷಕ ಸಂಘದ ಸಲಹೆಗಾರ ಹೇಮಚಂದ್ರ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಶಿಕ್ಷಣದ ಗುರಿಯಾಗಲಿ ಎಂದು ಹಾರೈಸಿದರು. ಮೇನೇಜಿಂಗ್ ಟ್ರಸ್ಟಿ ವಾಲ್ಡರ್ ಸ್ಟೀಫನ್ ಮೆಂಡಿಸ್ ಸಂಚಾಲಕಿ ಪ್ಲೋರೆನ್ಸ್ ಮೆಂಡಿಸ್ ಕ್ರಿಸ್ಮಸ್ ಆಚರಣೆಯನ್ನು ಉದ್ಘಾಟಿಸಿ ಶುಭ ಕೋರಿದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅಹಮದ್ಕಬೀರ್, ಪ್ರಭ ವಾಜ್, ಗೀತಾ, ಮುಖ್ಯಶಿಕ್ಷಕ ಮಹೇಶ್ ಶೆಟ್ಟಿ, ಮುಖ್ಯಶಿಕ್ಷಕಿ ಸ್ವರ್ಣಲತಾ, ಉಪಸ್ಥಿತರಿದ್ದರು. ಪ್ರತಿಭಾ ಪುರಸ್ಕಾರದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ನಿಶ್ಮಿತಾ ಸ್ವಾಗತಿಸಿ, ನಿಶಾ ವಂದಿಸಿದರು. ಅಪೇಕ್ಷಾ ಕಾರ್ಯಕ್ರಮ ನಿರೂಪಿಸಿದರು. ಕುಷಿ ವೈಶಾಖ್ ದೀಕ್ಷಿತ್, ಮುಸ್ಕಾನ್ ಸಹಕಾರಿಸಿದರು.
2ವಿಪಿ ಪ್ರತಿಭಾ ಪುರಸ್ಕಾರ