ಪೊಳಲಿ:ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಮಣಿಕಂಠಪುರದ ಮಣಿಕಂಠಭಜನಾ ಮಂದಿರದಲ್ಲಿ 13ನೇ ವರ್ಷದ “ಭಜನಾ ಸಂಕೀರ್ತನೆ” ಅಯ್ಯಪ್ಪ ಸ್ವಾಮಿ ಮಹಾಪೂಜೆ” ಶ್ರೀ ದುರ್ಗಾನಮಸ್ಕಾರಪೂಜೆ”ಯು ನಡೆಯಲಿದೆ.
ಕಾರ್ಯಕ್ರಮ:
ಜ.5 ಶನಿವಾರ ಸೂಯಾಸ್ತದಿಂದ ಮರುದಿನ ಜ.6 ಸೂಯೋದಯದವರೆಗೆ ನಾನಾ ಭಜನಾಮಂಡಳಿಗಳಿಂದ “ಭಜನಾ ಸಂಕೀರ್ತನೆ”ಯು ನಡೆಯಲಿದೆ. ಪೊಳಲಿ ರಾಮಕೃಷ್ಣತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ದೀಪಪ್ರಜ್ವಲನೆಗೊಳಿಸಿ ಆಶೀರ್ವದಿಸಲಿದ್ದಾರೆ.
ಶನಿವಾರ ಬೆಳಗ್ಗೆ 8 ಗಂಟೆಗೆ ಗಣಹೋಮ ಅನಂತಪದ್ಮನಾಭ ಭಟ್ ಪೊಳಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಸಂಜೆ 6 ಗಂಟೆಯಿಂದ ಕಾರ್ಕಳ ಪ್ರಸಾದ್ ಭಟ್ ನೇತೃತ್ವದಲ್ಲಿ “ಶ್ರೀದುರ್ಗಾನಮಸ್ಕಾರಪೂಜೆ” ನೆರವೇರಲಿದೆ.ಜ.6ರಂದು ಭಾನುವಾರ ಬೆಳಗ್ಗೆ 8.30ರಿಂದ ಅಯ್ಯಪ್ಪ ಸ್ವಾಮಿಯ ವೃತಧಾರಿಗಳಿಗೆ ಇರುಮುಡಿಕಟ್ಟುವುದು ಮಧ್ಯಾಹ್ನ 12.30ಕ್ಕೆ “ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ” ಮಧ್ಯಾಹ್ನ 1. ಗಂಟೆಗೆ “ಅನ್ನಸಂತರ್ಪಣೆ” ನಡೆಯಲಿದೆ ಎಂದು ಭಜನಾ ಮಂದಿರದ ಅಧ್ಯಕ್ಷ ಮಹಾಬಲ ಸುವರ್ಣ ಹಾಗೂ ಜಯಂತ ಮಣಿಕಂಠಪುರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.