ವಾಮಂಜೂರು:ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಸ್ಥಾಪಕಿ ದಿ ಮೋಹಿನೀ ಅಪ್ಪಾಜಿ ನಾೈಯ್ಕ್ ಇವರ ಸ್ಮರರ್ಣಾರ್ಥ ಸ್ಥಾಪಕರ ದಿನಾಚರಣೆಯು ಜರಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸ್ಥಳೀಯ ಸಮಾಜ ಸೇವಕರೂ, ಮಾಜಿ ಕಾರ್ಪೋರೆಟರ್ ಜಯಪ್ರಕಾಶ್ ವಾಮಂಜೂರು ಇವರು ಮಾತನಾಡಿ ವಿಕಲಚೇತನ ಮಕ್ಕಳನ್ನು ಸಾಮಾನ್ಯ ಮಕ್ಕಳೊಡನೆ ಸೇರಿಸಿ ಕಲಿಸುವ ವಿಭಿನ್ನ ಪ್ರಯತ್ನವು ಫಲನೀಡಿ ಇಂದು ಸಾವಿರಾರು ವಿಶೇಷ ವಿದ್ಯಾರ್ಥಿಗಳು ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಮೂಲಕ ಸಮಾಜದ ಮುಖ್ಯವಾಹಿನಿಯನ್ನು ಸೇರುವಂತಾಗಿದೆ ಎಂದರು.25vpmangalajhoti

ತಮ್ಮ ತಾಯಿ ದಿ. ಭಾಗೀರತಮ್ಮ ಹಾಗೂ ಮೊಹಿನೀ ಅಪ್ಪಾಜೀ ನಾೈಯ್ಕ್ ಇವರ ಗೆಳೆತನವನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಖಜಾಂಜಿಗಳಾದ ಡಾ ಕೆ ದೇವರಾಜ್ ಅವರು ಮಾತನಾಡುತ್ತಾ ಸಂಸ್ಥೆಯ ಸ್ಥಾಪಕರಿಗೆ ವಿಶೇಷ ಮಕ್ಕಳ ಮೇಲೆ ಇದ್ದ ಪ್ರೀತಿಯನ್ನು ಸ್ಮರಿಸಿಕೊಂಡು, 2000 ನೇ ಇಸವಿಯಲ್ಲಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಬಳಗದ ಜೊತೆಗೆ ಮಂಗಳಜ್ಯೋತಿ ಸಮಗ್ರ ಶಾಲೆಯು ಸಮಗ್ರ ಶಾಲೆಯುಸೇರಿಕೊಂಡ ಕ್ಷಣಗಳನ್ನು ನೆನಪಿಸಿಕೊಂಡರು.

ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಭಟ್ ವಿ, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಮಾರ್ಯೆಟ್ ಮಸ್ಕರೇನಸ್, ಪಿಟಿಎ ಅಧ್ಯಕ್ಷೆ ಅಕ್ಷತಾ ಉಪಸ್ಥಿತರಿದ್ದರು. ಹೈಸ್ಕೂಲು ವಿಭಾಗದ ಮುಖ್ಯಸ್ಥರಾದ ರಮೇಶ್ ಆಚಾರ್ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ರೇಣುಕಾ ವಂದಿಸಿದರು, ಶಿಕ್ಷಕ ರಾಮಕೃಷ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷನಾಟ್ಯಕಲಾ ಕೇಂದ್ರ ತಕಧಿಮಿ ತಂಡ ಗುರುಪುರ, ಕೈಕಂಬ ಇಲ್ಲಿಯ ರಕ್ಷಿತ್ ಶೆಟ್ಟಿ ಪಡ್ರೆ ಇವರ ಶಿಷ್ಯವೃಂದದವರಿಂದ ಯಕ್ಷಗಾನ ನಾಟ್ಯ ರೂಪಕ “ಕೃಷ್ಣಂ ವಂದೇ ಜಗದ್ಗುರುಂ” ಹಾಗೂ ಯಕ್ಷಗಾನ ಪ್ರಸಂಗ “ಸುದರ್ಶನ ವಿಜಯ”ಪ್ರದರ್ಶಿಸಲ್ಪಟ್ಟಿತು.IMG-20190125-WA0022

IMG-20190125-WA0021

By suddi9

Leave a Reply

Your email address will not be published. Required fields are marked *