ಗುರುಪುರ: ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದು, ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಗದ್ದುಗೆಯಲ್ಲಿ ಕೂರಿಸುವ ಸಲುವಾಗಿ ಕಾರ್ಯಕರ್ತರೆಲ್ಲಾ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾಗಿದೆ. ಕೇಂದ್ರ ಸರಕಾರ ಭಾರತೀಯರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸವನ್ನು ಅತ್ಯುತ್ಸಾಹದಿಂದ ಮಾಡಬೇಕಾಗಿದೆ. ಪ್ರತಿಪಂಚಾಯತ್‍ಗಳಿಗೂ 20 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದ್ದು, ಬಾಕಿ ಉಳಿದ ಕೆಲಸವನ್ನು ಪೂರ್ಣಗೊಳಿಸೋಣ. ಅದಕ್ಕಾಗಿ ಕೆಲಸ ನಡೆಯಬೇಕಾದ ಪ್ರದೇಶದ ಬಗ್ಗೆ ತನಗೆ ಮನವಿಯನ್ನು ಸಲ್ಲಿಸಿದರೆ ಪಂಚಾಯತ್‍ರಾಜ್ ವ್ಯವಸ್ಥೆಯ ಮೂಲಕ ಕೆಲಸ ಪೂರ್ಣಗೊಳಿಸಬಹುದು ಎಂದು ಭರತ್ ಶೆಟ್ಟಿ ಹೇಳಿದರು.2401malali5 (2)

ಎಡಪದವು ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ ಗೌಡ ಮಾತಾಡಿ, ಜ.29ರ ಮಂಗಳವಾರ ಎಡಪದವಿನ ಶ್ರೀರಾಮ ಮಂದಿರದ ಪಟ್ಟಾಭಿರಾಮ ಸಭಾಭವನದಲ್ಲಿ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಗುರುಪುರ ಪಿರ್ಕ ವ್ಯಾಪ್ತಿಯ ವಿಶೇಷ ಜನಸಂಪರ್ಕ ಸಭೆ ನಡೆಯಲಿದೆ. ತಳಮಟ್ಟದ ನಾಗರಿಕರಿಗೆ ಇದರಿಂದ ಸಾಕಷ್ಟು ಅನುಕೂಲತೆ ಇದ್ದು, ಆಯಾಯ ಇಲಾಖೆಯ ವಿ.ಎ., ಪಿಡಿಓ. ತಹಶೀಲ್ದಾರ್, ನಾಡಕಚೇರಿ, ಅಂಗನವಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸೇರಿ ಹಲವು ಅದಿಕಾರಿಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು, ಸ್ಥಳದಲ್ಲೇ ಪರಿಹಾರ ಒದಗಿಸುವ ಕಾರ್ಯಕ್ರಮವಾಗಲಿದೆ. ಫಲಾನುಭವಿಗಳು ಸೂಕ್ತ ದಾಖಲೆಯೊಂದಿಗೆ ಆಗಮಿಸುವಂತೆ ತಿಳಿಸಿದರು.

ಅವರು ಬುಧವಾರ ಕೈಕಂಬದ ನವಮಿ ಸಭಾಂಗಣದಲ್ಲಿ ನಡೆದ ಭಾರತೀಯ ಜನತಾಪಾರ್ಟಿ ಮಂಗಳೂರು ಉತ್ತರ ಇದರ ವಿಶೇಷ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ನೋಟ್‍ಬ್ಯಾನ್, ಜಿಎಸ್‍ಟಿ ಮುಂತಾದ ದೇಶಕ್ಕೆ ಒಳಿತಾಗಬಹುದಾದ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವ ಕೆಲಸವನ್ನು ವಿರೋಧಿಗಳು ಮಾಡುತ್ತಿದ್ದಾರೆ. ಈ ಬಗ್ಗೆ ಕಾರ್ಯಕರ್ತರು ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು. ನೋಟ್‍ಬ್ಯಾನ್‍ನಿಂದಾಗಿ ದೇಶದ ಹವಲಾ ದಂಧೆ ನಿಂತುಹೋಗಿದ್ದು, ನಕ್ಸಲಿಸಂ, ಸೈನಿಕರಿಗೆ ಕಲ್ಲು ತೂರಾಟ ನಿಂತುಹೋಗಿದೆ. ಪ್ರಧಾನಿಯವರ ಪ್ರತಿಯೋಜನೆಗಳಲ್ಲೂ ದೇಶದ ಒಳಿತು ಇದ್ದೇ ಇದೆ. ಈ ಬಗ್ಗೆ ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕು. ಜನರೊಂದಿಗೆ ಬೆರೆಯುವಾಗ ಪದಾದಿಕಾರಿಗಳು ವಿನಯದಿಂದ ವರ್ತಿಸಿ, ವಿರೋಧಿಗಳನ್ನೂ ಬಿಜೆಪಿಗೆ ಸೆಳೆಯುವಂತೆ ಕೆಲಸ ಮಾಡಬೇಕು. ನಮೋ ಆಪ್‍ಗಳನ್ನು ಡೌನ್‍ಲೋಡ್ ಮಾಡಿಕೊಂಡು ಪ್ರಧಾನಿಯವರ ಕೆಲಸ ಕಾರ್ಯದ ಬಗ್ಗೆ ಅರಿತುಕೊಳ್ಳುವ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮದಲಿ ಉಪಾಧ್ಯಕ್ಷ ಶಿವಪ್ಪ ಬಂಗೇರಾ, ಕಾರ್ಯದಶೀ ಅಮೃತಪಾಲ್, ಪ್ರಧಾನ ಕಾರ್ಯದರ್ಶಿ ಸುಧಾಕರ್ ಅಡ್ಯಾರು ಹಾಗೂ ಅಶೋಕ್ ಕೃಷ್ಣಾಪುರ, ತಾ.ಪಂ. ನಾಗೇಶ್ ಶೆಟ್ಟಿ, ಗುರುಪುರ ಶಕ್ತಿಕೇಂದ್ರದ ಸೋಹನ್ ಅಥಿಕಾರಿ, ಎಡಪದವು ಶಕ್ತಿಕೇಂದ್ರದ ಶಕ್ತಿ ಗಣೇಶ್ ಪಾಕಾಜೆ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *