ಮಕ್ಕಳಿಗೆ ಸಂಪತ್ತು ಮಾಡಿಡುವುದಕ್ಕಿಂತ ಮಕ್ಕಳನ್ನೆ ಸಂಪತ್ತು ಮಾಡುವು ಶ್ರೇಷ್ಠ -ಜಿನ್ನಪ್ಪ ನಾಯಕ್
ಕೈಕಂಬ:ಮಾರಾಟಿ ಸಮಾಜ ಸೇವಾ ಸಂಘ(ರಿ) ಗಂಜಿಮಠ ವತಿಯಿಂದ ಗಂಜಿಮಠ ವ್ಯಾಪ್ತಿಯ 10 ಗ್ರಾಮಗಳ ಮರಾಟಿ ಸಮಾಜದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕ ಮತ್ತು ಪರಿಕರಗಳನ್ನು ನೀಡುವ ಕ್ರಾರ್ಯಕ್ರಮವನ್ನು ಗಂಜಿಮಠ ಸಂಘದ ಸಬಾಂಗಣದಲ್ಲಿ ಏರ್ಪಡಿಸಲಾಗಿತ್ತು.

IMG-20190708-WA0032
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾರಾಟಿ ಸಮಾಜ ಸೇವಾ ಸಂಘ ದ.ಕಜಿಲ್ಲೆ ಇದರ ಅಧ್ಯಕ್ಷರಾದ ಜಿನ್ನಪ್ಪ ನಾಯಕ್ ಮಾತನಾಡುತ್ತ ಸಮಾಜ ನಮಗೆ ಏನು ನೀಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವು ಏನು ನೀಡಿದ್ದೇವೆ ಎಂಬುವುದನ್ನು ಅರಿತುಕೊಂಡು. ನಮ್ಮ ದುಡಿತದ ಸ್ವಲ್ಪ ಪಾಲನ್ನು ಸಮಾಜದ ಅಸಕ್ತರಿಗೆ, ದುರ್ಬಲರಿಗೆ, ಬಡವರಿಗೆ ಮತ್ತು ಶಿಕ್ಷಣಕ್ಕೆ ನೀಡುವ ಮೂಲಕ ಸಮಾಜ ಮುಖಿ ಕೆಲಸ ಮಾಡವುದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ಕಾರ್ಯ. ನಮ್ಮ ಮಕ್ಕಳಿಗೆ ನಾವು ಸಂಪತ್ತನ್ನು ಕೂಡಿಡದೆ ಅವರನ್ನೆ ಸಂಪತ್ತು ಮಾಡುವುದು ಶ್ರೇಷ್ಠ. ಶಿಕ್ಷಣದಿಂದ ಬದುಕು ಸುಂದರವಾಗುತ್ತದೆ ಎಂದರು.

IMG-20190708-WA0033ಇನ್ನೊರ್ವ ಅತಿಥಿಗಳಾದ ಮೂಡಬಿದಿರೆ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ರಾಮಚಂದ್ರ ಕೆಂಬಾರೆ ಮಾತನಾಡುತ್ತಾ ಮಕ್ಕಳಿಗೆ ಮನೆಗಳಲ್ಲಿ ಉತ್ತಮ ಸಂಸ್ಕಾರ, ಗುರುಹಿರಿಯರಲ್ಲಿ ಗೌರವ ಮತ್ತು ಭಕ್ತಿಯನ್ನು ಕಲಿಸಿ ಕೊಡುವುದು ಅನಿವಾರ್ಯ ಎಂದರು. ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಒಡ್ಡೂರು ಅಣ್ಣಿನಾಯಕ್ ವಹಿಸಿದ್ದರು. ಕಿಡ್ನಿ ವೈಪಲ್ಯದಿಂದ ಬಳಲುವ ರಾಘವೇಂದ್ರ ನಾಯಕ್‍ರವರಿಗೆ ವೈದ್ಯಕೀಯ ನೆರವು ನೀಡಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷೆ ರಾಜೀವಿ ನಾಯಕ್, ಕೋಶಾಧಿಕಾರಿ ಕೇಶವ ನಾಯಕ್ ಉಪಸ್ಥಿತರಿದ್ದರು.ಪುರಂದರ ನಾಯಕ್, ಸತೀಶ್ ನಾಯಕ್, ಸುಂದರ ನಾಯಕ್ ಸಹಕರಿಸಿದರು. ಸಂಘದ ಅಧ್ಯಕ್ಷರಾದ ಪದ್ಮನಾಭ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ್ ನಾಯಕ್ ಮುಚ್ಚೂರು ಧನ್ಯವಾದ ಸಲ್ಲಿಸಿದರು. ನಿತೇಶ್ ಕುಮಾರ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಉಪಾಧ್ಯಕ್ಷ ಶೇಖರ ಕಡ್ತಲ ಕಾರ್ಯಕ್ರಮ ನಿರೂಪಿಸಿದರು.

 

By suddi9

Leave a Reply

Your email address will not be published. Required fields are marked *