ಕೈಕಂಬ:ಮೂಲರಪಟ್ನದಲ್ಲಿ ಹೊಸ ಸೇತುವೆ ನಿರ್ಮಾಣಕ್ಕಾಗಿ ಜನಪ್ರತಿನಿಧಿಗಳು ಮತ್ತು ಸರಕಾರದ ಮೇಲೆ ಒತ್ತಡ ಹೇರಲು ಹೋರಾಟಕ್ಕಾಗಿ ಮುತ್ತೂರು ಮೂಲರಪಟ್ನ ಸೇತುವೆ ಹೋರಾಟ ಸಮಿತಿ ಅಸ್ಥಿತ್ವಕ್ಕೆ ಬಂದಿದೆ. ಮುತ್ತೂರು, ಅರಳ, ಬೆಳ್ಳೂರು, ಕಿಲೆಂಜಾರು, ಕುಳವೂರು,ಮತ್ತು ಮೊಗರು ಗ್ರಾಮಗಳ ಗ್ರಾಮಸ್ಥರು ನಿನ್ನೆ ಮುತ್ತೂರಿನ ಶಾಲಾ ಸಭಾಂಗಣದಲ್ಲಿ ಸಭೆ ಸೇರಿದ್ದು ಮಾಜಿ ಗ್ರಾ.ಪಂ.ಸದಸ್ಯ ಹರಿಯಪ್ಪ ಮುತ್ತೂರುರವರ ಅಧ್ಯಕ್ಷತೆಯಲ್ಲಿ ಹೋರಾಟ ಸಮಿತಿಯನ್ನು ರಚಿಸಿದ್ದಾರೆ.

IMG-20190708-WA0000 (1)ಸೇತುವೆ ಕುಸಿದು ಒಂದು ವರ್ಷವಾದರೂ ಹೊಸ ಸೇತುವೆ ನಿರ್ಮಾಣದ ಬಗ್ಗೆ ಯಾವುದೇ ರೀತಿಯ ಪ್ರಕ್ರಿಯೆಗಳು ಪ್ರಾರಂಭವಾಗದೇ ಇರುವ ಬಗ್ಗೆ ಸಭೆಯಲ್ಲಿ ಗ್ರಾಮಸ್ಥರು ತೀವೃ ಅಕ್ರೋಶ ವ್ಯಕ್ತಪಡಿಸಿದ್ದು ಹೊಸ ಸೇತುವೆ ನಿರ್ಮಾಣವಾಗಿ ಸಂಚಾರಕ್ಕೆ ಮುಕ್ತವಾಗುವವರೆಗೆ ನಿರಂತರವಾಗಿ ಹೋರಾಟಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಹರಿಯಪ್ಪ ಮುತ್ತೂರು ಮಾತನಾಡಿ ಹೊಸ ಸೇತುವೆ ನಿರ್ಮಾಣ ಹೊರಾಟ ಸಮಿತಿಯ ಏಕೈಕ ಗುರುಯಾಗಿದ್ದು ಇದು ಯವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗಳ ವಿರುದ್ದದ ಹೋರಾಟವಲ್ಲ.ಪಕ್ಷಾತೀತವಾಗಿ ಹೋರಾಟ ಸಮಿತಿ ಅಸ್ಥಿತ್ವಕ್ಕೆ ತರಲಾಗಿದೆ. ಪ್ರಮುಖ ಸಂಪರ್ಕ ಸೇತುವೆ ಕುಸಿದು ವರ್ಷವಾದರೂ ಹೊಸ ಸೇತುವೆ ನಿರ್ಮಿಸಿ ಜನಸಾನ್ಯರ ಸಮಸ್ಯೆ ಪರಿಹರಿಸಲು ಯಾವ ಪಕ್ಷವಾದರೂ ಮುಂದಾಗಿಲ್ಲದಿರುವುದರಿಂದ ಹೋರಾಟ ಸಮಿತಿ ರಚಿಸಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು. ಮುಂದಿನ ಸೋಮವಾರ 15ರಂದು ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಂದೆ ವಿವಿಧ ಹಂತಗಳಲ್ಲಿ ಪ್ರತಿಭಟನೆಗಳನ್ನು ನಡೆಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ರಮೀಝ್ ಕುಪ್ಪೆಪದವು, ಜಯಂತ ಬಡಗಬೆಳ್ಳೂರು, ಬಿಕ್ಕೋಡ್ ಶರೀಫ್, ಯೋಗೀಶ್, ಕೇಶ, ಮುತ್ತೂರು, ಗೋಪಾಲ ಮುತ್ತೂರು, ಅಹಮ್ಮದ್ ಭಾವ ಕುಪ್ಪೆಪದವು, ಅಸೀಫ್ ಮೂಲರಪಟ್ನ ಮುಂತಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

 

By suddi9

Leave a Reply

Your email address will not be published. Required fields are marked *