ಬಡಗಬೆಳ್ಳೂರು:ಯಕ್ಷಕಲಾ ಸಂಘ ವರಕೋಡಿ ಇದರ ವತಿಯಿಂದ “ಸ್ವಾತಂತ್ರ್ಯೋತ್ಸವ ಸಮಾರಂಭ”ವು ಆ. 15ರಂದು ಗುರುವಾರ ವರಕೋಡಿ ಯಕ್ಷಕಲಾ ಸಂಘದ “ಯಕ್ಷಧಾಮ”ದ ವಠಾರದಲ್ಲಿ ನಡೆಯಲಿದೆ.ಬೆಳಗ್ಗೆ 8.30ಕ್ಕೆ ಮಾಡ್ಲಾಯ ದೈವದ ಪಾತ್ರಿ ಚಂದ್ರಶೇಖರ ಅಜಿಲ ಧ್ವಜಾರೋಹಣ ಮಾಡಲಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಬಾಕಿಮಾರು ಗದ್ದೆಯಲ್ಲಿ ” ಕೆಸರ್‍ಡ್ ಒಂಜಿ ದಿನ ಕೆಸರುಗದ್ದೆ ಕ್ರೀಡಾ ಕೂಟ” ನಡೆಯಲಿದೆ.

kesardonji dina

ವಿಸೂ. “ಕೆಸರು ಗದ್ದೆ ಕೂಟದಲ್ಲಿ ಯುವಕರಿಗೆ,ಯುವತಿಯರಿಗೆ, ಬಾಲಕ ಮತ್ತುಬಾಲಕಿಯರ ವಿಭಾಗದಲ್ಲಿ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ.ಕ್ರೀಡಾ ಕೂಟದ ಹಗ್ಗ ಜಗ್ಗಾಟ, ಮತ್ತು ಎಲ್ಲಾ ಸ್ಪರ್ಧೆಗಳು ಕೆಸರು ಗದ್ದೆಯಲ್ಲಿ ನಡೆಯಲಿದೆ.”

ಮಧ್ಯಾಹ್ನ 1 ಗಂಟೆಗೆ ಸಂಘದ ಸದಸ್ಯರು ಮತ್ತು ವರಕೋಡಿ ನಾಗರಿಕರ ಸಹಕಾರದೊಂದಿಗೆ “ಆಟಿದ ವನಸ್”

ಸಂಜೆ 5 ಗಂಟೆಯಿಂದ ಸಭಾ ಕಾರ್ಯಕ್ರಮ:

ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಬೆಂಜನಪದವು ಉದ್ಯಮಿ ಉಮೇಶ್ ಸಾಲಿಯಾನ್ ವಹಿಸಲಿದ್ದಾರೆ.ಬೆಳ್ಳೂರು ಶ್ರೀ ಕಾವೇಶ್ವರ ಯಕ್ಷಗಾನ ಮಂಡಳಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ,ಮಾಡ್ಲಾಯ ದೈವದ ಪಾತ್ರಿ ಚಂದ್ರಶೇಖರ ಅಜಿಲ,ವಿಷವೈದ್ಯರು ಜನಾರ್ಧನ ಎಚ್ ಎಸ್, ಕಮ್ಮಾಜೆ ನಾಗಶ್ರೀ ಮಿತ್ರವೃಂದದ ಅಧ್ಯಕ್ಷ ಪ್ರಮೋದ್ ಕಮ್ಮಾಜೆ, ಅಮ್ಮುಂಜೆ ವೀರಯೋಧ ಯಾದವ ಫ್ರೆಂಡ್ಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್,ವರಕೋಡಿ ಯಕ್ಷಕಲಾ ಸಂಘದ ಅಧ್ಯಕ್ಷ ದಿನೇಶ್ ಅವರು ವೇದಿಕೆಯನ್ನು ಅಲಂಕರಿಸಲಿದ್ದಾರೆ

By suddi9

Leave a Reply

Your email address will not be published. Required fields are marked *