ಕೈಕಂಬ:ಕೂಟ ಮಹಾಜಗತ್ತುಸಾಲಿಗ್ರಾಮ (ರಿ) ಇದರ ಅಂಗಸಂಸ್ಥೆಯಾದ ಕೂಟ ಮಹಿಳಾ ವೇದಿಕೆ ಪೊಳಲಿ ಇದರ ವತಿಯಿಂದ ಹಲಸಿನಹಬ್ಬ ಕಾರ್ಯಕ್ರಮವು ನಡೆಯಿತು. ಇದರ ಉದ್ಘಾಟನೆಯನ್ನು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಪ್ರ. ಅರ್ಚಕ ಮಾಧವ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಪೊಳಲಿ ಕೂಟ ಮಹಾಜಗತ್ತು ಇದರ ಅಧ್ಯಕ್ಷ ಎಂ ಅಣ್ಣಯ್ಯ ಅವರು ಹಲಸಿನ ಮಾತನಾಡಿದರು.ಸಂಪನ್ಮೂಲ ವ್ಯಕ್ತಿಯಾಗಿ ಡಾ. ಶ್ರೀ ಕುಮಾರ್ ಕೆ. ಅವರು ಹಲಸಿನ ಗಿಡವನ್ನು ಬೆಳೆಸಿ ಅದರಿಂದ ಬರುವಂತಹ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು. ಹಲಸಿನ ಹಣ್ಣಿನಿಂದ ತಯಾರಿಸಿದ ಸುಮಾರು 23ಬಗೆಯ ಖಾಧ್ಯಗಳನ್ನು ಪ್ರದರ್ಶಿಸಿ ರುಚಿಯಾದ ತಿನಸುಗಳನ್ನು ಸವಿಯಲು ನೀಡಿದರು. ಕೂಟ ಮಹಿಳಾ ಜಗತ್ತು ಇದರ ಅಧ್ಯಕ್ಷೆ ಪದ್ಮಿನಿಭಟ್ , ಪ್ರೇಮ ನಾರಾಯಣ ಸ್ವಾಗತಿಸಿ, ಪದ್ಮಾವತಿ ವಂದಿಸಿದರು.
