ಕೈಕಂಬ : ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಗಾಳಿ ಸಂದರ್ಭದಲ್ಲಿ ಗುರುಪುರ ತಾರಿಕರಿಯದ ಬಳ್ಳಿ ಎಂಬಲ್ಲಿ ಗುಡ್ಡದ ಭಾರೀ ಮರ ಹಾಗೂ ಗುಡ್ಡ ಕುಸಿದು ಮನೆ ಸಂಪೂರ್ಣ ಜಖಂಗೊಂಡಿದ್ದ ಪುಷ್ಪಾ ಬಳ್ಳಿ ಎಂಬವರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 95,100 ರೂ ಚೆಕ್‍ನ್ನು ಶಾಸಕ ಡಾ. ಭರತ್ ಶೆಟ್ಟಿ ಹಸ್ತಾಂತರಿಸಿದರು.
ಮಂಗಳೂರು ನಗರ ಪಾಲಿಕೆಯಲ್ಲಿರುವ ಶಾಸಕರ ಕಚೇರಿಯಲ್ಲಿ ನಡೆದ ಚೆಕ್ ವಿತರಣಾ ಸರಳ ಸಮಾರಂಭದಲ್ಲಿ ಪುಷ್ಪಾರೊಂದಿಗೆ ಶೇಖರ ಬಳ್ಳಿ, ಬಿಜೆಪಿ ಮುಖಂಡ ರಾಜೇಶ ಸುವರ್ಣ, ಪ್ರಶಾಂತ್ ಮುಂಡ, ಶ್ಯಾಮರಾಯ ಆಚಾರ್ಯ, ಸುಧೀರ್ ಕಾಮತ್, ಗುರುಪುರ ಗ್ರಾಮ ಲೆಕ್ಕಾಧಿಕಾರಿ(ವೀಎ) ಮಂಜುಳಾ ಮೊದಲಾದವರಿದ್ದಾರೆ.