ಕೈಕಂಬ: ಅಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ 73ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್(ಗುರುಪುರ) ಸದಸ್ಯ ಹಾಗೂ ಸಹರಾ ಶಾಲಾ ಅಧ್ಯಕ್ಷ ಯು ಪಿ ಇಬ್ರಾಹಿಂ ಧ್ವಜಾರೋಹಣಗೈದರು.
ಕಾರ್ಯಕ್ರಮದಲ್ಲಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಉಪಾಧ್ಯಕ್ಷ ಅಹಮ್ಮದ್ ಬಾವ ಅಂಗಡಿಮನೆ, ಸಂಚಾಲಕ ಇಸ್ಮಾಯಿಲ್, ಪಿಟಿಎ ಅಧ್ಯಕ್ಷ ದಿಶಂಬರ, ಯು. ಹಮೀದ್, ಖಾದ್ರಿ ಮೋನು, ಶಾಲಾ ಮುಖ್ಯ ಶಿಕ್ಷಕ ಕೇಶವ ಎಚ್, ಗುರುಪುರ ಗ್ರಾಪಂ ಸದಸ್ಯರಾದ ಎ ಕೆ ಮೊಹಮ್ಮದ್, ಎ ಕೆ ಅಶ್ರಫ್, ಶಾಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.