ಕೈಕಂಬ: ಮುಂದಿನ ವರ್ಷ ಕಚ್ಚೂರು ಕ್ಷೇತ್ರದಲ್ಲಿ ತಾಯಿ ಕಚ್ಚೂರ ಮಾಲ್ತೀ ದೇವಿಗೆ ನಡೆಯಲಿರುವ ಬ್ರಹ್ಮ ಕಲಶೋತ್ಸವವು ಮುಂಡಾಲೋತ್ಸವವಾಗಬೇಕು ಎಂದು ಉಡುಪಿ ಜಿಲ್ಲಾಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬುರವರು ಹೇಳಿದರು.
ಅವರು ಆಗಸ್ಟ್ 11 ರಂದು ಗುರುಪುರ ಕೈಕಂಬದ ಡಾ! ಬಿ.ಆರ್ ಅಂಬೇಡ್ಕರ್ ಸಮಾಜ ಮಂದಿರದಲ್ಲಿ ಶ್ರೀ ಕ್ಷೇತ್ರ ಕಚ್ಚೂರ ಮಾಲ್ತೀದೇವಿ ಮತ್ತು ಶ್ರೀ ಬಬ್ಬು ಸ್ವಾಮಿ ಮೂಲ ಕ್ಷೇತ್ರದಲ್ಲಿ ಜನವರಿ ತಿಂಗಳಲ್ಲಿ ನಡೆಯಲಿರುವ ರಥ ಸಮರ್ಪಣೆ, ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಬೃಹತ್ ಹೊರೆಕಾಣಿಕೆ ಮೆರವಣಿಗೆಯ ಪೂರ್ವಭಾವಿ ಸಭೆಯನ್ನು ದೀಪ ಬೆಳಗಿಸಿ ಉಧ್ಘಾಟಿಸಿ ಮಾತನಾಡಿದರು.
ಅವರು ಮಾತನಾಡುತ್ತಾ, ಕಚ್ಚೂರು ಕ್ಷೇತ್ರವು ಮುಂಡಾಲ ಬಾಂಧವರು ಒಟ್ಟುಗೂಡುವ ತಾಯಿ ಕಚ್ಚೂರ ಮಾಲ್ದಿದೇವಿಯ ಪುಣ್ಯ ಕ್ಷೇತ್ರವಾಗಿದ್ದು, ಮುಂಬರುವ ತಾಯಿಯ ಬ್ರಹ್ಮ ಕಲಶೋತ್ಸವದಂದು ಸಮಾಜ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಬ್ರಹ್ಮ ಕಲಶೋತ್ಸವವನ್ನು ಮುಂಡಾಲೋತ್ಸವವನ್ನಾಗಿಸ ಬೇಕು ಎಂದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಶ್ರೀ ಕ್ಷೇತ್ರ ಕಚ್ಚೂರಿನ ಅಧ್ಯಕ್ಷರಾದ ಗೋಕುಲ್ ದಾಸ್ ರವರು ಮಾತನಾಡುತ್ತಾ, ಮುಂಡಾಲ ಬಾಂಧವರು ಶೈಕ್ಷಣಿಕವಾಗಿ ಬೆಳೆಯುವುದರ ಜೊತೆಗೆ ಧಾರ್ಮಿಕ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸುತ್ತಾ, ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎಂದರು.
ಗೌರವಾಧ್ಯಕ್ಷರಾದ ಚೆನ್ನಪ್ಪ ಮೂಲ್ಕಿರವರು ಮುಂಬರುವ ಜನವರಿ ತಿಂಗಳು 16 ರಿಂದ 20 ರವರೆಗೆ ಬ್ರಹ್ಮ ಕಲಶ ನಡೆಯಲಿದ್ದು, ಈ ಸಂಧರ್ಭದಲ್ಲಿ ರಥ ಸಮರ್ಪಣಾ ಕಾರ್ಯ ಕೂಡ ನಡೆಯಲಿದೆ. ಈ ನಿಟ್ಟಿನಲ್ಲಿ ದ.ಕನ್ನಡ, ಉಡುಪಿ, ಕುಂದಾಪುರ ಮತ್ತು ಚಿಕ್ಕಮಗಳೂರು ಜಿಲ್ಲೆಯಿಂದ ಸಹಸ್ರಾರು ಮುಂಡಾಲ ಬಾಂಧವರು ಭಾಗವಹಿಸಲಿದ್ದಾರೆ ಎಂದರು.
ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಶಿವಪ್ಪ ನಂತೂರುರವರು ಹೊರೆ ಕಾಣಿಕೆ ಸಂಗ್ರಹ ಮತ್ತು ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಮುಂಡಾಲ ಸಮಾಜ ಗುರುಪುರ ಕೈಕಂಬದ ಗೌರವಾಧ್ಯಕ್ಷರಾದ ಮೋನಪ್ಪ ಅದ್ಯಪಾಡಿ, ಅಧ್ಯಕ್ಷರಾದ ನವೀನ್ ಪದಕಣ್ಣಾಯ, ಪ್ರಚಾರ ಸಮಿತಿ ಸಂಚಾಲಕರಾದ ಬಿ ಬಾಬು, ಜನಾರ್ಧನ ಕಾಪಿಕಾಡ್, ರವಿರಾಜ್, ಲೋಕೇಶ್ ಕಂಚಿನಡ್ಕರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿನೀತ್ ಪ್ರಾರ್ಥಿಸಿದರು. ಭರತ್ ಎಸ್. ಕರ್ಕೇರರವರು ಸ್ವಾಗತಿಸಿದರು. ಜಯಂತ್ ಮಾಸ್ಟರ್ ಧನ್ಯವಾದಗಳನ್ನು ಅರ್ಪಿಸಿದರು. ವಿಠ್ಠಲ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.
