ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಾತಬೆಟ್ಟು ಗ್ರಾಮದ ಬೆಂಚಿನಡ್ಕ ಎಂಬಲ್ಲಿ ಮನೆಯೊಂದಕ್ಕೆ ಕಳ್ಳರು ನುಗ್ಗಿ ಚಿನ್ನಾಭರಣ ದೋಚಿರುವ ಘಟನೆಗೆ  ಸಂಬಂಧಿಸಿ ಪುಂಜಾಲಕಟ್ಟೆ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿದ್ದಾರೆ.  ಬಂಧಿತ ಆರೋಪಿಯನ್ನು ಸ್ಥಳೀಯ ನಿವಾಸಿ ವಿಕೇಶ್ ಕುಮಾರ್   ( 23) ಎಂದು ಹೆಸರಿಸಲಾಗಿದೆ.ಈತನಿಂದ ಕಳವಾದ22.75 ಗ್ರಾಂ ತೂಕದ ಚಿನ್ನದ ಗಟ್ಟಿ, 6.400   ಗ್ರಾಂ ತೂಕದ ಚಿನ್ನದ ಸರ,10.7 ಗ್ರಾಂ ಚಿನ್ನದ ನೆಕ್ಲೆಸ್ ಸೇರಿದಂತೆ 39.85 ಗ್ರಾಂ ಚಿನ್ನಾಭರಣ ಹಾಗೂ 1,500  ನಗದು ಹಣ ಸಹಿತ 1,17,100 ರೂ.ಮೌಲ್ಯದ ಸೊತ್ತನ್ನು  ವಶಪಡಿಸಲಾಗಿದೆ ಎಂದು ಪೂಂಜಾಲಕಟ್ಟೆ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
IMG-20190914-WA0107
ಕಳವುಗೈದ ಚಿನ್ನಾಭರಣವನ್ನು  ವಿವಿದೆಡಯಲ್ಲಿ ಅಡವು ಇಟ್ಟಿದ್ದನ್ನು ಆರೋಪಿ  ಪೊಲೀಸರ ತನಿಖೆಯ ವೇಳೆ  ಬಾಯಿಬಿಟ್ಟಿದ್ದ.ಪಿಲಾತಬೆಟ್ಟುಗ್ರಾಮದ ಬೆಂಚಿನಡ್ಕ ನಿವಾಸಿ  ಏಂಜಲಿನ್ ಮಸ್ಕರೇನಸ್ ಅವರು ಆ.24 ರ ಸಂಜೆ 5 ಗಂಟೆಗೆ ಮನೆಗೆ ಬೀಗ ಹಾಕಿ ಸಂಬಂಧಿಕರಲ್ಲಿ ತೆರಳಿದ್ದು, ಸೆ.10 ರಂದು ಸಂಜೆ 5.00 ಗಂಟೆಗೆ ಮನೆಗೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿತ್ತು. ಮನೆಗೆ  ಬೀಗ ಹಾಕಿದ ಬಳಿಕ  ಕೀಯನ್ನು  ಮನೆಯ ಸಿಟ್ ಔಟ್ ನಲ್ಲಿದ್ದ ಹೂಕುಂಡದಲ್ಲಿರಿಸಿ ಅವರು ತೆರಳಿದ್ದರು.ಆರೋಪಿ ಹೂಕುಂಡದಲ್ಲಿಟ್ಟಿದ್ದ ಕೀಯಿಂದ ಮನೆಯ ಬಾಗಿಲನ್ನು ತೆರೆದು ಮನೆಯೊಳಗೆ ಪ್ರವೇಶಿಸಿ  ಬೆಡ್ ರೂಮ್ ನಲ್ಲಿದ್ದ ಗೋದ್ರೆಜ್  ಕಪಾಟಿನಿಂದ  ಚಿನ್ನಾ ಭರಣ,ನಗದು ಕಳವುಗೈದು ಪರಾರಿಯಾಗಿದ್ದ.  ಈ ಬಗ್ಗೆ  ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಬಂಟ್ವಾಳ ಉಪವಿಭಾಗದ ಎಎಸ್ಪಿ    ಸೈದುಲ್ಲಾ ಅಡಾವತ್ ಅವರ  ಮಾರ್ಗದರ್ಶನ,  ಬೆಳ್ತಂಗಡಿ ಸಿ.ಐ.ಸಂದೇಶ್ ಅವರ ನೇತೃತ್ವದಲ್ಲಿ ಪುಂಜಾಲಕಟ್ಟೆ  ಪೊಲೀಸ್ ಠಾಣೆಯ  ಎಸ್ ಐ ಸೌಮ್ಯ ಮತ್ತವರ ಸಿಬಂದಿಗಳಾದ ವೆಂಕಟೇಶ್ ;ಸಂದೀಪ್. ಅಬುಬಕ್ಕರ್ ಹರೀಶ್, ಸತ್ಯಪ್ರಕಾಶ್ ರವರು   ಪ್ರಕರಣ ಬೆಳಕಿಗೆ ಬಂದ  ಎರಡೆ  ದಿನದಲ್ಲಿ   ಆರೋಪಿಯನ್ನು  ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
Attachments area

 

By suddi9

Leave a Reply

Your email address will not be published. Required fields are marked *