ಕೈಕಂಬ: ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದ ಸಮೀಪದ ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಚೈತನ್ಯಾನಂದ ಸ್ವಾಮಿಗಳಿಂದ ಸೆ.24ರಿಂದ ಕುಮಾರಿ ಪೂಜೆ ನಡೆಯುತ್ತಿದೆ.
ಮಹಾಲಾಯ ಅಮವಾಸ್ಯೆಯ ಬೆಳಗ್ಗೆ ಆಶ್ರಮದಿಂದ ಮಡಿಯುಟ್ಟ ಮಹಿಳೆಯರು ಹಾಗೂ ಆಶ್ರಮದ ಮಕ್ಕಳು ಭಜನೆಯಲ್ಲಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ರಾಜರಾಜೇಶ್ವರೀ ಹಾಗೂ ಭದ್ರಕಾಳಿಯ ಭಾವಚಿತ್ರದ ಜತೆಗೆ ದೀಪ ಹಿಡಿದುಕೊಂಡು ದೇವರ ನಾಮಸ್ಮರಣೆ ಮಾಡಲಾಗುತ್ತದೆ.
ನಂತರ ಪೊಳಲಿಯ ರಾಜರಸ್ತೆಯಲ್ಲಿ ಮುಖ್ಯ ದ್ವಾರದವರೆಗೆ ಸಾಗಿ ಅಲ್ಲಿಂದ ಹಿಂದುರುಗಿ ದೇವಸ್ಥಾನಕ್ಕೆ ಸುತ್ತು ಬಂದು ದೇವರ ದರ್ಶನ ಪಡೆದು ಆಶ್ರಮಕ್ಕೆ ಬಂದು ಸ್ವಾಮೀಜಿ ಅವರು ನವದರ್ುಗೆಯರಂತೆ ಕುಮಾರಿಯವರನ್ನು ಅಲಂಕರಿಸಿ ಪೂಜೆ ನೆರವೇರಿಸುತ್ತಾರೆ. ದಿನಕ್ಕೆ ಒರ್ವ ಕುಮಾರಿಯನ್ನು ದೇವಿಯಂತೆ ಅಲಂಕರಿಸಿ ಪೂಜೆ ಮಾಡುತ್ತಾರೆೆ. 9 ದಿನಗಳಲ್ಲಿ ಪೂಜೆ ನೆರವೇರಿಸಿ. 9 ಕುಮಾರಿಯವರನ್ನು ದೇವಿಯ ಪ್ರತಿಮೆಯಂತೆ ಅಲಂಕರಿಸಿ ನವದುಗರ್ೆಯರ ಪೂಜೆ ನೆರವೇರಿಸುತ್ತಾರೆ. ಪ್ರತಿದಿನ ಮಹಿಳೆಯರಿಂದ ಭಜನೆ ಕಾರ್ಯಕ್ರಮ ನಡೆಯುತ್ತದೆ. ಕುಮಾರಿಯರೆಂದರೆ ಸಣ್ಣ ಹೆಣ್ಣುಮಕ್ಕಳನ್ನು ವಿವಿಧ ಅಲಂಕಾರ ಮಾಡಿಸಿ ಅವರಿಗೆ ದೇವರಂತೆ ಪೂಜಿಸುತ್ತಾರೆ.

