ಸುದ್ದಿ9 ಕೈಕಂಬ:ವಿಧಾತ್ರಿ ಕಲಾವಿದೆರ್ ಕೈಕಂಬ ಕುಡ್ಲ ಇವರ ಭರತ್ ಎಸ್ ಕರ್ಕೇರಾ ರಚಿಸಿರುವ “ಏರೆಗ್ಲಾ ಗೊತ್ತಿಜ್ಜಿ “ತುಳು ಹಾಸ್ಯಮಯ ನಾಟಕಕ್ಕೆ ಸೆ.29ರಂದು ಸೋಮವಾರ ಶ್ರೀ ಕ್ಷೇತ್ರ ವಜ್ರದೇಹಿಯಲ್ಲಿ ಶುಭ ಮೂಹೂರ್ತದಲ್ಲಿ ನೆರವೇರಿತು.


ನಾಟಕ ತಿಳಿ ಹಾಸ್ಯದೊಂದಿಗೆ ಸಾಮಾಜಿಕ ಜಾಗೃತಿಯನ್ನು ಮೂಡಿಸಬೇಕು ಈ ನಿಟ್ಟಿನಲ್ಲಿ ಈ ನಾಟಕವು ಅತ್ಯಲ್ಪ ಸಮಯದಲ್ಲೇ ಅತೀ ಹೆಚ್ಚು ಜನರನ್ನು ತಲುಪಲಿ.ಅತೀ ಹೆಚ್ಚು ನಾಟಕ ಪ್ರದರ್ಶನಗೊಳ್ಳಲಿ ಎಂದು ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಶುಭ ಆಶೀರ್ವಚನಗೈದರು. ಕಾರ್ಯಕ್ರಮದಲ್ಲಿ ರಮೇಶ್ ರೈ ಕುಕ್ಕುವಳ್ಳಿ ನಿರ್ಧೇಶಕ ಚಿದಾನಂದ ಅಧ್ಯಪಾಡಿ, ನಾಟಕ ರಚನೆಗಾರ ಭರತ್ ಎಸ್ ಕರ್ಕೇರಾ, ಸಂಗೀತ ನೀರ್ಧೇಶಕ ಶ್ರೇಯಸ್ ಕಲ್ಲಡ್ಕ , ವಿಕೆ ಜೈನ್ ವಾಮದಪದವು, ನಿತಿನ್ ಹೊಸಂಗಡಿ ,ರವಿ ಕುಮಾರ್ ನಾಡಜೆ, ಸನೀತಾ , ಬಾಲು ನಾಡಜೆ,ದೀಪಿಕಾ ಮುಂತಾದವರು ಉಪಸ್ಥಿತರಿದ್ದರು.