ಬಂಟ್ವಾಳ:ತಾಲ್ಲೂಕಿನ ಮೇರಮಜಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೆಟ್ಟು ಪರಿಸರದಲ್ಲಿ ಕಳೆದ ಒಂದು ವರ್ಷಗಳಿಂದ ಗೇಲ್ ಕಂಪೆನಿ ವತಿಯಿಂದ ನಡೆಯುತ್ತಿರುವ ಮಂಗಳೂರು-ಕೊಚ್ಚಿ ಗ್ಯಾಸ್ ಪೈಪ್ ಲೈನ್ ಕಾಮಗಾರಿಯಿಂದ ಭತ್ತದ ಕೃಷಿ ಮತ್ತು ಖಾಸಗಿ ಜಮೀನುಗಳಿಗೆ ಹಾನಿ ಉಂಟು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಇಲ್ಲಿನ ನೂರಾರು ಮನೆಗಳ ಪೈಕಿ ಜಮೀನು ಕಳೆದುಕೊಂಡ ಕೆಲವೊಂದು ಸಂತ್ರಸ್ತರಿಗೆ ಪರಿಹಾರಧನ ನೀಡಲಾಗಿದ್ದು, ಇಲ್ಲಿನ ಬಂಡೆಗಳನ್ನು ಸಿಡಿಸಲು ಉಪಯೋಗಿಸುವ ಸ್ಪೋಟಕಗಳಿಂದ ಹಲವಾರು ಮನೆಗಳಿಗೆ ಹಾನಿ ಉಂಟಾಗಿದೆ. ಇದೀಗ ಮಾನವೀಯತೆ ಮೀರಿ ಭತ್ತದ ಪೈರು ಮತ್ತು ಕೆಲವೊಂದು ಮನೆಗಳ ಆವರಣ ಗೋಡೆಗಳಿಗೆ ಪೈಪ್ ಲೈನ್ ಕಾಮಗಾರಿ ನೆಪದಲ್ಲಿ ಹಾನಿ ಉಂಟು ಮಾಡುತ್ತಿದ್ದಾರೆ. ಇದಕ್ಕಾಗಿ ಸ್ಥಳೀಯರು ಒಟ್ಟಾಗಿ ಭಾನುವಾರ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎಂದು ಸ್ಥಳೀಯ ಕೃಷಿಕ ಪದ್ಮನಾಭ ಕೋಟ್ಯಾನ್ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *