ಕೈಕಂಬ: ಕಳೆದ ಹಲವು ವರ್ಷಗಳಿಂದ  ಸಾಮಾಜಿಕ, ಧಾರ್ಮಿಕ ಹಾಗೂ  ಸಾಂಸ್ಕ್ರತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಡಪದವಿನ ಧನಂಜಯ ಮೇಸ್ತ್ರಿ ಅವರು ತಮ್ಮ ಮಗ ಧನುಷ್ ಹುಟ್ಟುಹಬ್ಬ ಆಚರಣೆಯ ಪ್ರಯುಕ್ತ ಕೊರೊನಾ ವೈರಸ್ ವಿರುದ್ದದ ಹೋರಾಟದಲ್ಲಿ ಹಗಲಿರುಳೆನ್ನದೆ ಕಾರ್ಯನಿರ್ವಹಿಸುತ್ತಿರುವ, ಎಡಪದವು ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ,  ವೈದ್ಯಕೀಯ ಸಿಬಂದಿಗಳಿಗೆ  ಮತ್ತು 30 ಬಡಕುಟುಂಬಗಳಿಗೆ ಧನ ಸಹಾಯದ ಜತೆಯಲ್ಲಿ
ಅಕ್ಕಿ  ಮತ್ತು  ದವಸ ಧಾನ್ಯಗಳನ್ನು ಸೋಮವಾರ ಎಡಪದವು ಪಂಚಾಯತ್ ವಠಾರದಲ್ಲಿ ವಿತರಿಸಲಾಯಿತು.20200413_122936
ಧನಂಜಯ ಮೇಸ್ತ್ರಿ, ಶ್ರೀಮತಿ ಯಶೋದಾ ಧನಂಜಯ ಮೇಸ್ತ್ರಿ, ಪುತ್ರ ಧನುಷ್, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಾಲತಿ, ಉಪಾಧ್ಯಕ್ಷ ಗಂಗಾಧರ್, ಪಿಡಿಓ ಬೊಗಮಲ್ಲಣ್ಣ, ಲೆಕ್ಕ ಸಹಾಯಕ ಇಸ್ಮಾಯಿಲ್ ಈ ಸಂದರ್ಭದಲ್ಲಿ ಹಾಜರಿದ್ದರು. 20200413_121847

By suddi9

Leave a Reply

Your email address will not be published. Required fields are marked *