ಕೈಕಂಬ : ಗುರುಪುರ ದೋಣಿಂಜೆ, ಕೊಳದಬದಿ ಬಯಲು ಪ್ರದೇಶದಲ್ಲಿ ಭಾನುವಾರ ಒಣ ಹುಲ್ಲಿಗೆ ಹತ್ತಿಕೊಂಡ ಬೆಂಕಿ ನೋಡನೋಡುತ್ತಲೇ ಸುತ್ತಲ ವಸತಿ ಪ್ರದೇಶದತ್ತ ವ್ಯಾಪ್ತಿಸಿದ್ದು, ಜನರು ಭಯಭೀತರಾದರು.gur-apl-12-fire-2

ಬೆಂಕಿಯಿಂದ ತಾಳೆ ಮರಗಳ ಸಹಿತ ಹಲವು ಮರಗಳು ಸುಟ್ಟು ಹೋಗಿವೆ. ಬೆಂಕಿ ಹತ್ತಿಕೊಂಡ ಪ್ರದೇಶಕ್ಕೆ ಹತ್ತಿರದ ಕುಕ್ಕುದಕಟ್ಟೆಯಲ್ಲಿ ಹೊಸ ಸೇತುವೆ ಕಾಮಗಾರಿ ನಡೆಸುತ್ತಿದ್ದ ಮೊಗರೋಡಿ ಕನ್‍ಸ್ಟ್ರಕ್ಷನ್ ಕಂಪೆನಿಯ ನೀರಿನ ಟ್ಯಾಂಕರ್ ತಕ್ಷಣ ಸ್ಥಳಕ್ಕೆ ಧಾವಿಸಿ, ಸ್ಥಳೀಯ ಯುವಕರ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿತು. ಇದೇ ಹೊತ್ತಿಗೆ ಮಂಗಳೂರಿನಿಂದ ಅಗ್ನಿಶಾಮಕ ದಳದ ನೀರಿನ ಟ್ಯಾಂಕರ್ ಸಿಬ್ಬಂದಿಯೊಂದಿಗೆ ಆಗಮಿಸಿತು.13vp benki (2)

ಇವೆರಡು ತಂಡವು ತುರ್ತು ಕಾರ್ಯಾಚರಣೆ ನಡೆಸದೆ ಹೋಗುತ್ತಿದ್ದರೆ, ಆಕಾಶದೆತ್ತರಕ್ಕೆ ವ್ಯಾಪಿಸಿದ್ದ ಬೆಂಕಿಯ ಕೆನ್ನಾಲಗೆಯಿಂದ ಪರಿಸರದ ಮನೆಗಳಿಗೆ ತೀವ್ರ ನಷ್ಟ ಉಂಟಾಗುವ ಸಾಧ್ಯತೆ ಇತ್ತು. ಬೆಂಕಿ ನಿಯಂತ್ರಣಕ್ಕೆ ಬರುತ್ತಲೇ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *