ಕೈಕಂಬ :ಕಷ್ಟದಲ್ಲಿರುವವರ ಮತ್ತು ರೋಗಿಗಳ ಸೇವೆ ದೇವರ ಆಣತಿಯಂತೆ `ಸ್ನೇಹ ಸದನ’ ಸಂಸ್ಥೆಯಿಂದ ನಡೆಯುತ್ತಿದೆ. ಎಚ್‌ಐವಿ ಪೀಡಿತರು ಮತ್ತು ಅವರ ಮಕ್ಕಳು, ಅಶಕ್ತರಿಗೆ ನೆರವಾಗುವ ಸಂತ ಕಮಿಲಿಯಸ್ ಅನುಯಾಯಿಗಳ ಈ ಸಂಸ್ಥೆಯಿದ ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಅನೇಕ ಸಮಾಜಮುಖಿ ಕೆಲಸಗಳು ನಡೆದಿವೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ರೆ. ಫಾ. ಡಾ. ಲಾರೆನ್ಸ್ ಮುಕಿಝಿ ಮೆಚ್ಚುಗೆ ವ್ಯಕ್ತಪಡಿಸಿದರು.

gur-mar-10-sanmana-1 (2)
ಅವರು ಬುಧವಾರ ಗುರುಪುರ ಕೈಕಂಬದ ಸ್ನೇಹ ಸದನ(ಸ್ನೇಹ ಚಾರಿಟೇಬಲ್ ಟ್ರಸ್ಟ್) ಮತ್ತು ರೋಸಾ ಮಿಸ್ತಿಕಾ ಶಿಕ್ಷಣ ಸಂಸ್ಥೆ ಜಂಟಿಯಾಗಿ `ಸ್ನೇಹ ಸದನ’ದಲ್ಲಿ ಆಯೋಜಿಸಿದ ಕೋವಿಡ್ ಪರಿಹಾರ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಆಶೀರ್ವಚನ ನೀಡುತ್ತ, ರೋಗಕ್ಕೆ ಜಾತಿ ಇಲ್ಲ. ಅಂತೆಯೇ ಕೋವಿಡ್ ಎಲ್ಲ ಧರ್ಮ, ಜಾತಿಯವರಿಗೂ ಬಂತು. ಇಂತಹ ಕಷ್ಟ ಕಾಲದಲ್ಲಿ ಈ ಸಂಸ್ಥೆ ಸಮಾಜದ ಎಲ್ಲ ವರ್ಗದವರ ಕಷ್ಟ ನಿವಾರಿಸುವಲ್ಲಿ ಮಾನವ ಧರ್ಮ ಮೆರೆದಿದೆ. ಕಷ್ಟಕ್ಕೆ ಸ್ಪಂದಿಸುವ ಮನಸ್ಸು ದೊಡ್ಡದು. ಸಹನೆ-ಸಹಬಾಳ್ವೆ ಜೀವನಕ್ಕೆ ಮುಖ್ಯ ಎಂದರು.gur-mar-10-j r lobo-2

ಮಾಜಿ ಶಾಸಕ ಜೆ ಆರ್ ಲೋಬೊ ಮಾತನಾಡಿ, ಕೋವಿಡ್ ಮಹಾಮಾರಿ ಮನುಕುಲವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಇಂದು ಕೂಡಾ ಅದರ ಪರಿಣಾಮ ದಟ್ಟವಾಗಿದೆ ಎಂದವರು, ನಿಸ್ವಾರ್ಥ ಸೇವೆಗೆ ಹೆಸರಾದ ಈ ಸಂಸ್ಥೆಗೆ ಸಮಾಜದ ಬೆಂಬಲ ಅವಶ್ಯ ಎಂದರು.ಗುರುಪುರ ಧರ್ಮ ಪ್ರಾಂತ್ಯದ ರೆ. ಫಾ. ಆಂತೋನಿ ಲೋಬೊ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ, ಸಂಸ್ಥೆಗೆ ಎಲ್ಲ ಸಮಾಜಮುಖಿ ಕೆಲಸಗಳಿಗೆ ದೇವರ ದಯೆ ಇರಲಿ ಎಂದು ಹಾರೈಸಿದರು.gur-mar-10-kit distribute

ಈ ಸಂದರ್ಭದಲ್ಲಿ ಸ್ನೇಹ ಸದನ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ರೆ. ಫಾ. ಬೇಬಿ ಎಲ್ಲಿಕಲ್ ಹಾಗೂ ಬೆಥನಿ ಪ್ರಾಂತ್ಯಾಧಿಕಾರಿ ಸಿಸ್ಟರ್ ಸಿಸಿಲಿಯಾ ಮೆಂಡೋನ್ಸಾ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಕ್ಕುತ್ತರವಾಗಿ ಹಿತವಚನ ನೀಡಿದರು.ವೇದಿಕೆಯಲ್ಲಿ ಜೀವದಾನ್ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಜಾನ್ಸಿ ಡಿಎಸ್‌ಸಿ, ರೋಸಾ ಮಿಸ್ತಿಕ ಶಿಕ್ಷಣ ಸಂಸ್ಥೆಯ ಮ್ಯಾನೇಜರ್ ಸಿಸ್ಟರ್ ಜೂಲಿಯಾನಾ ಬಿಎಸ್ ಹಾಗೂ ಸ್ನೇಹ ಸದನ ಸಂಸ್ಥೆಯ ನಿರ್ದೇಶಕ ಫಾ. ತೇಜಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ಲೀನಾ ಕಾರ್ಯಕ್ರಮ ನಿರೂಪಿಸಿದರು.

gur-mar-10-swami-1
ರೋಸಾ ಮಿಸ್ತಿಕ ಶಾಲೆ, ಬೆಥನಿ ಶಾಲೆ ಹಾಗೂ ಸ್ಥಳೀಯ ಬಡವರ ಸಹಿತ ೫೦೦ಕ್ಕೂ ಮಿಕ್ಕ ವಿದ್ಯಾರ್ಥಿಗಳ ಪಾಲಕರಿಗೆ ಕೋವಿಡ್ ಪರಿಹಾರ ಕಿಟ್(ಅಕ್ಕಿ ಹಾಗೂ ಇತರ ದೈನಂದಿನ ಸೊತ್ತು) ವಿತರಿಸಲಾಯಿತು.ಆನಂತರ ಶಾಲಾ ಮಕ್ಕಳಿಗೆ ನೃತ್ಯ ಕಾರ್ಯಕ್ರಮ ಜರುಗಿತು.

By suddi9

Leave a Reply

Your email address will not be published. Required fields are marked *