ಕೈಕಂಬ : ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಜಾತಿ-ಮತ ಬೇಧವಿಲ್ಲದ ಸಮಾತೆಯ ಶಿಕ್ಷಣ ಲಭಿಸುತ್ತದೆ. ಅಂಗನವಾಡಿ ಮಕ್ಕಳ ಶಿಕ್ಷಣಕ್ಕೆ ಅಡಿಪಾಯ ಕೇಂದ್ರವಾಗಿದೆ. ಹಾಗಾಗಿ ಈ ಹಂತದಲ್ಲಿ ಪಾಲಕರು ಮಕ್ಕಳ ಭಾವನೆಗಳಿಗೆ ಬೆಲೆ ಕೊಟ್ಟು ಬೆಳೆಸಿದಾಗ ಒಂದು ಮಗು ಉತ್ತಮ ಸಂಸ್ಕಾರದೊಂದಿಗೆ ಸಮಾಜದಲ್ಲಿ ಒಳ್ಳೆಯ ನಾಗರಿಕನಾಗಲು ಸಾಧ್ಯ. ಅಂಗನವಾಡಿಗಳಿಗೆ ಸರ್ಕಾರದ ಪ್ರತಿಯೊಂದು ಯೋಜನೆ ತಲುಪುವಂತೆ ನೋಡಿಕೊಳ್ಳಲಾಗುವುದು ಎಂದು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ತಿಳಿಸಿದರು.gur-aug-18-anganawadi-1ಗುರುಪುರ ಪಂಚಾಯತ್ ಕಚೇರಿಯ ಹತ್ತಿತರದ ಬಂಗ್ಲೆಗುಡ್ಡೆಯಲ್ಲಿ ದ ಕ ಜಿ ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು(ಗ್ರಾಮಾಂತರ) ಹಾಗೂ ಗುರುಪುರ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಲೋಕೋಪಯೋಗಿ ಇಲಾಖೆಯ ನಬಾರ್ಡ್ ಆರ್‌ಐಡಿಎಫ್ ೨೫ನೇ ಯೋಜನೆಯಡಿ ೧೬ ಲಕ್ಷ ರೂ ಅನುದಾನದಲ್ಲಿ ನಿರ್ಮಿಸಲಾದ ‘ಬಂಗ್ಲೆ ಅಂಗನವಾಡಿ’ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಶಾಸಕರು ಮಾತನಾಡಿದರು.gur-aug-18-anganawadi-3ಗುರುಪುರ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅಬೂಬಕ್ಕರ್ ಮಾತನಾಡಿ, ಸರ್ಕಾರದ ಶಿಕ್ಷಣ ಮತ್ತು ಸ್ವಚ್ಚತೆ ಕ್ಷೇತ್ರದ ಕೆಲಸಗಳಿಗೆ ನಮ್ಮ ಪಂಚಾಯತ್ ಹೆಚ್ಚಿನ ಆದ್ಯತೆ ನೀಡುತ್ತ ಬಂದಿದೆ. ಸುಂದರವಾದ ಈ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿರುವ ಜಾಗದಲ್ಲಿ ಒಂದು ಕೈತೋಟ ನಿರ್ಮಿಸಲು ಹಾಗೂ ಸರ್ಕಾರದ ಅನುದಾನದಲ್ಲಿ ಪುಟಾಣಿಗಳಿಗೆ ಆಟದ ಸೊತ್ತುಗಳಿರುವ ಆಟದ ಮೈದಾನ ನಿರ್ಮಿಸಲು ಇಚ್ಚಿಸಿದ್ದೇವೆ ಎಂದರು.gur-aug-18-anganawadi-4ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ದಿಲ್‌ಶಾದ್ ಎ, ಪಂಚಾಯತ್ ಸದಸ್ಯರಾದ ಸಚಿನ್ ಅಡಪ, ಜಿ ಎಂ ಉದಯ ಭಟ್, ರಾಜೇಶ್ ಸುವರ್ಣ, ಸುನಿಲ್ ಜಲ್ಲಿಗುಡ್ಡೆ, ಹರೀಶ್ ಬಳ್ಳಿ, ದಾವೂದ್, ನಳಿನಿ ಶೆಟ್ಟಿ, ಸಫರಾ ಎನ್, ರೆಹನಾ ಎಚ್, ಅಶ್ರಫ್ ಎನ್, ಉಪ ತಹಶೀಲ್ದಾರ್ ಶಿವಪ್ರಸಾದ್, ಕಂದಾಯ ನಿರೀಕ್ಷಕ ನವನೀತ ಮಾಳವ, ದಕ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಾಪಾ ಬೋವಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ) ಮಂಗಳೂರು(ಗ್ರಾಮಾಂತರ) ಶೈಲಾ ಕೆ ಕಾರಗಿ, ಬಾಲ ವಿಕಾಸ ಸಮಿತಿ ಅಧ್ಯಕ್ಷ ಸಂಶದ್, ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಸಂಜೀವ ಕುಮಾರ್ ಜಿ ಕೆ, ಗುತ್ತಿಗೆದಾರರು, ಮಕ್ಕಳು, ಪಾಲಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಿಚಾರಕಿ ಮಾಲಿನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.gur-aug-18-anganawadi-5

By suddi9

Leave a Reply

Your email address will not be published. Required fields are marked *