ಬಂಟ್ವಾಳ: ಬತ್ತದ ಬೆಳೆ ಕೊಯ್ಲಿಗೆ ಬಂದಿದೆ. ಸಾಮಾನ್ಯವಾಗಿ ಗ್ರಾಮೀಣ ಭಾಗಗಳಲ್ಲಿ ದೀಪಾವಳಿ ಮುಗಿಯುತ್ತದ್ದಂತೆಯೇ ಕೊಯ್ಲು ಆರಂಭಗೊಳ್ಳುತ್ತದೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಿರೀಕ್ಷೀತ ಫಸಲು ಸಿಗಬಹುದೇ ಎನ್ನುವ ಆತಂಕದಲ್ಲೇ ರೈತರು ಗದ್ದೆಗೆ ಇಳಿಯುತ್ತಿದ್ದಾರೆ. ಕಾಮರ್ಿಕರ ಸಮಸ್ಯೆಯಿಂದಾಗಿ ಮನೆಮಂದಿಯೇ ಸೇರಿಕೊಂಡು ಗದ್ದೆಯಲ್ಲಿ ಕೊಯ್ಲು ನಡೆಸುವ ಈ ದಿನಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೊಯ್ಲು ನಡೆಸುವ ಪದ್ದತಿ ತಾಲೂಕಿನಲ್ಲಿ ಕಂಡು ಬರುತ್ತಿದೆ.


ಬತ್ತದ ಬೆಳೆ ನಾಟಿ ಮಾಡುವಾಗ ಮತ್ತು ಕಟಾವಿನ ಸಂದರ್ಬ ಕಾರ್ಮಿಕರನ್ನು ಹುಡುಕುವುದೇ ದೊಡ್ಡ ಸಮಸ್ಯೆ. ಕಾರ್ಮಿಕರು ಸಿಕ್ಕರೂ ಅವರ ವೇತನ, ಬೇಡಿಕೆಗಳನ್ನು ಪೂರೈಸುವುದು ರೈತರಿಗೆ ದೊಡ್ಡ ತಲೆ ನೋವು. ಮಳೆಯಿಂದಾಗಿ ಸಿಗುವ ಫಸಲು ಕಾರ್ಮಿಕರ ವೇತನವನ್ನು ಭರಿಸಲು ಸಾಲದೇ ಇರುವುದರಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿರುವುದು ಸಾಮಾನ್ಯ.
ಆದರೂ ಕೆಲ ಭಾಗಗಳ್ಲಲಿ ಇರುವ ಗದ್ದೆಯನ್ನು ಹಡೀಲು ಬಿಡುವ ಬದಲು ತಕ್ಕ ಮಟ್ಟಿಗೆ ಬತ್ತದ ಬೇಸಾಯ ಮಾಡಿ ಮನೆಮಂದಿಯೇ ಕೊಯ್ಲು ನಡೆಸುವ ದೃಶ್ಯಗಳು ಸಾಮಾನ್ಯವಾಗುತ್ತಿದೆ. ಇದೀಗ ಕೊಯ್ಲು ಸೇರಿದಂತೆ ಕೃಷಿ ಸಂಬಂಧಿ ಕೆಲಸಗಳನ್ನು ಮಾಡಲು ಗುತ್ತಿಗೆ ಪದ್ದತಿಯಲ್ಲಿ ಕೆಲಸ ಮಾಡಿಸುವ ಮೂಲಕ ಕಾರ್ಮಿಕರ ಸಮಸ್ಯೆಗೆ ಸೆಡ್ಡು ಹೊಡೆಯಲಾಗಿದೆ.
ಇದೀಗ ಬತ್ತದ ಕಟಾವು ನಡೆಸುವ ಸಂದರ್ಭವಾಗಿರುವದರಿಂದ ಪೈರು ಕಟಾವು, ಸಾಗಾಟ, ಬತ್ತ ವಿಂಗಡಣೆ ಮೊದಲಾದ ಕೆಲಸಗಳನ್ನು ಗುತ್ತಿಗೆ ವಹಿಸಿಕೊಳ್ಳಲಾಗುತ್ತದೆ. ಗುತ್ತಿಗೆದಾರನ ಜೊತೆ ಪುರಷರು, ಮಹಿಳೆಯರು ಸೇರಿ ಹತ್ತಕ್ಕಿಂತಲೂ ಹೆಚ್ಚು ಮಂದಿ ಕಾರ್ಮಿಕರು ಗದ್ದೆಯಲ್ಲಿ ದುಡಿಯುತ್ತಾರೆ. ಮಾಲಿಕ ಗುತ್ತಿಗೆದಾರನಿಗೆ ವೇತನ ಪಾವತಿಸುವ ಜವಬ್ದಾರಿಯನ್ನಷ್ಟೇ ಹೊಂದಿದ್ದರೆ, ಕಾರ್ಮಿಕರ ಕೆಲಸದ ಜವಬ್ದಾರಿ, ವಹಿಸಿಕೊಂಡ ಕೆಲಸವನ್ನು ಪೂರ್ತಿಯಾಗಿ ನೆರವೇರಿಸಿ ಕೊಡುವ ಜವಬ್ದರಾಇಯನ್ನು ಗುತ್ತಿಗೆದಾರ ನೋಡಿಕೊಳ್ಳುತ್ತಾನೆ.
ಕಾರ್ಮಿಕರಿಲ್ಲ, ಬಂದ ಕಾರ್ಮಿಕರು ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ ಎಂದು ಆತಂಕ ಪಡುತ್ತಿದ್ದ ಕೃಷಿಕರು ಇದೀಗ ಕೃಷಿ ಚಟುವಟಿಕೆಗಳನ್ನು ಗುತ್ತಿಗೆ ನೀಡಿ ನಿರಾಳರಾಗಿದ್ದಾರೆ.