ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಸಾಮರಸ್ಯ ವಿಭಾಗದ “ತುಡರ್ ” ಕಾರ್ಯಕ್ರಮ ನ.5ರಂದು ಶುಕ್ರವಾರ ನಡೆಯಿತು.
ಪೊಳಲಿ ದೇವಸ್ಥಾನದ ಅರ್ಚಕ ನಾರಾಯಣ ಭಟ್ ಹಾಗೂ ಪರಮೇಶ್ವರ ಭಟ್ ಗರ್ಭಗುಡಿಯಿಂದ ದೀಪವನ್ನು ಉಪೇಕ್ಷಿತರ ಕುಟುಂಬದ ಸದಸ್ಯರಾದ ಗೀತಾ ಮತ್ತು ಗಣೇಶ್ ಅವರ ಕೈಯಲ್ಲಿ ನೀಡಿದರು. ದೇವಳದ ಾಢಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಯು.ತಾರನಾಥ ಆಳ್ವ ಅವರ ಉಪಸ್ಥಿಯಲ್ಲಿ ಪೊಳಲಿಯಿಂದ ದೀಪವನ್ನು ಪಡೆದ ಅವರು ರಾಷ್ಟ್ರೀಯ ಸ್ವಯಂಸೇವಕರೊಂದಿಗೆ ಹಿಂದೂ ಬಾಂಧವರೊಂದಿಗೆ ಮೆರವಣಿಗೆಯಲ್ಲಿ ಸಾಣೂರುಪದವು ಎಂಬಲ್ಲಿಗೆ ಕೊಂಡು ಹೋಗಿ ಉಪೇಕ್ಷಿತರ ಕುಟುಂಬದೊಂದಿಗೆ ದೀಪಾವಳಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪೊಳಲಿಯ ರಾಮಕೃಷ್ಣ ತಪೋವನದ ಪೂಜ್ಯ ಸ್ವಾಮೀ ವಿವೇಕ ಚೈತನ್ಯಾನಂದ , ಪುತ್ತೂರು ಜಿಲ್ಲಾ ಕಾರ್ಯವಾಹ ವಿನೋದ್ ಕೊಡ್ಮಾಣ್, ಕರ್ನಾಟಕ ದಕ್ಷಿಣ ಪ್ರಾಂತ ಟೋಳಿ ಸದಸ್ಯ ಸುನಿಲ್ ಕುಲಕರ್ಣಿ, ಕುಟುಂಬದ ಹಿರಿಯರಾದ ಗಣೇಶ್ ,ಬಾಜಪಾ ಬಂಟ್ವಾಳ ಅಧ್ಯಕ್ಷ ದೇವಪ್ಪ ಪೂಜಾರಿ, ಬಡಗಬೆಳ್ಳೂರು ಗ್ರಾ. ಪಂ.ಅಧ್ಯಕ್ಷ ಪ್ರಕಾಶ್ ಆಳ್ವ ಉಪಾಧ್ಯಕ್ಷೆ ಮಮತಾ ಪದ್ಮನಾಭ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಯಶವಂತ ಪೊಳಲಿ, ಮಾಜಿ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ . ಗ್ರಾ. ಪಂ. ಸದಸ್ಯ ಲೋಕೇಶ್ ಭರಣಿ, ಭಾಜಪಾ ಜಿಲ್ಲಾ ಕಾರ್ಯಕಾರಿ ಸದಸ್ಯ ವೆಂಕಟೇಶ್ ನಾವಡ, ಜಿಲ್ಲಾ ಸಾಮರಸ್ಯ ಸಂಯೋಜಕ್ ಯೋಗೀಶ್ ಮಾಣಿ, ಬಂಟ್ವಾಳ ತಾಲೂಕು ಧರ್ಮ ಜಾಗಾರಣ ಸಂಯೋಜಕ್ ಸಂದೀಪ್ ಕಮ್ಮಾಜೆ, ಯುವರಾಜ್ ಪೂಂಜಾ , ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ ಕಿಶೋರ್ ಪಲ್ಲಿಪಾಡಿ, ರಮೇಶ್ ಬಟ್ಟಾಜೆ, ಸನತ್ ಅಮ್ಮುಂಜೆ, ಜಯಂತ್ ಮಣಿಕಂಠಪುರ, . ಪ್ರೀತಮ್ ಮಣಿಕಂಠಪುರ, ಸೋಮಶೇಖರ ಶೆಟ್ಟಿ, ಸುಕೇಶ್ ಚೌಟ, ಕೇಶವ ಪೊಳಲಿ, ರಾಜ ಮಾರ್ಲ, ಲೋಕೇಶ್ ಲಚ್ಚಿಲ್, ಪ್ರೇಮ್ ಕರಿಯಂಗಳ,ಚಂದ್ರಶೇಖರ್ ಕಂಡದಬೆಟ್ಟು, ಸುಮನ್ ರಾಜ್ ಮತ್ತಿತರು ಭಾಗವಹಿಸಿದ್ದರು.