ಸಂಘದಿಂದ ವೈದ್ಯಕೀಯ ತಪಾಸಣಾ ಶಿಬಿರ

ಕೈಕಂಬ: ವಾಮಂಜೂರಿನ ನೇತಾಜಿ ಆಟೋ ಚಾಲಕರ ಸಂಘದ ವತಿಯಿಂದ ಸ್ವಾತಂತ್ರ‍್ಯೋತ್ಸವ ದಿನಾಚರಣೆ ಅಂಗವಾಗಿ ವಾಮಂಜೂರು ಜಂಕ್ಷನ್‌ನಲ್ಲಿ ಧ್ವಜಾರೋಹಣ ನಡೆದ ಬಳಿಕ ಸಂಘದ ನೂತನ ಕಚೇರಿಯಲ್ಲಿ ನೀರುಮಾರ್ಗದ ಜಿ. ಆರ್. ಆಸ್ಪತ್ರೆ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಆಯೋಜಿಸಲಾದ ಈ ಶಿಬಿರವನ್ನು ನೇತಾಜಿ ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷರಾದ ಮೋಹನದಾಸ್ ನಾಯಕ್, ಮೆಲ್ವಿನ್ ಡಿ’ಸೋಜ ಮತ್ತು ಪುರುಷೋತ್ತಮ ಆಚಾರ್ಯ ಜಂಟಿಯಾಗಿ ಉದ್ಘಾಟಿಸಿದರು.

ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ಡಾ. ಸಿದ್ಧಾಂತ್ ಶೆಟ್ಟಿ, ಮೂಳೆ ತಜ್ಞ ಡಾ. ಅತೀಶ್ ಪಿ. ಬಬ್ಲಿ, ಸ್ತಿçÃರೋಗ ತಜ್ಞೆ ಡಾ. ಕಿಶೋರಿ ಹಾಗೂ ಸಿಬ್ಬಂದಿ ವರ್ಗ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮಾಡಿ, ಔಷಧಿ ಬಗ್ಗೆ ಸಲಹೆ ನೀಡಿದರು. ಸಂಘದ ಪದಾಧಿಕಾರಿಗಳು ಸಹಕರಿಸಿದರು. ಸುಮಾರು ೧೦೦ ಮಂದಿ ಈ ಶಿಬಿರದ ಪ್ರಯೋಜನ ಪಡೆದರು.

By suddi9

Leave a Reply

Your email address will not be published. Required fields are marked *