ಪೊಳಲಿ: ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲ್ಲಿಪಾಡಿ ಸಮೀಪದ ನಂದಿಗುರಿ ಎಂಬಲ್ಲಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ಪ್ರಯಾಣಿಕರ ಬಸ್ ತಂಗುದಾಣವು ದಿ| ನೋಣು ಮೂಲ್ಯ ಪಲ್ಲಿಪಾಡಿ ಹಾಗೂ ಅವರ ಧರ್ಮಪತ್ನಿ ದಿ| ತುಂಗಮ್ಮ ನೋಣು ಮೂಲ್ಯ ಸ್ಮರಣಾರ್ಥವಾಗಿ ಲೋಕಾರ್ಪಣೆಗೊಂಡಿತು.

ಬಸ್ ನಿಲ್ದಾಣದ ಉದ್ಘಾಟನೆಯನ್ನು ಕರಿಯಂಗಳ ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ಚಂದ್ರಹಾಸ ಪಲ್ಲಿಪಾಡಿ ನೆರವೇರಿಸಿದರು.

ಪಂಚಾಯತ್ ಉಪಾಧ್ಯಕ್ಷರಾದ ಜಿ. ರಾಜು ಕೋಟ್ಯಾನ್, ಲಕ್ಷ್ಮೀಶ್ ಶೆಟ್ಟಿ ಪಲ್ಲಿಪಾಡಿ, ಕರಿಯಂಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಾಲಿನಿ ಹಾಗೂ ದಾನಿಗಳಾದ ಹರೀಶ್ ಪಲ್ಲಿಪಾಡಿ ಹಾಗೂ ನಾಗರಾಜ್ ಭಟ್ ಪಲ್ಲಿಪಾಡಿ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.