ಬಂಟ್ವಾಳ: ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಮತಪಡೆಯುವುದು ಕಾಂಗ್ರೇಸ್ ಜಾಯಮಾನವಲ್ಲ, ಬಡಜನರಿಗೆ ನೆರವಾಗುವ ಸಾಮಾಜಿಕ , ಆರ್ಥಿಕ  ನೆರವು ನೀಡುವ ಕಾರ್ಯಕ್ರಮಗಳನ್ನು ಕೊಡುವ ಮೂಲಕ ಜನರನ್ನು ಸಾಂತ್ವಾನಗೊಳಿಸುವುದೇ ಕಾಂಗ್ರೇಸ್ ಸರಕಾರದ ಕನಸು ಈ ಕನಸನ್ನು ಈಡೇರಿಸುವ ಮಹತ್ತರ ಯೋಜನೆಗಳು ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾಡುತ್ತಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ  ಅವರು ಹೇಳಿದರು. ಅವರು ಬಂಟ್ವಾಳದ ಲೊರೊಟ್ಟೊಪದವಿನಲ್ಲಿ ಮನೆ ಅಡಿ ಸ್ಥಳದ ಸಕ್ರಮೀಕರಣ ಹಕ್ಕು ಪತ್ರ ವಿತರಣಾ ಸಮಾರಂಭ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲೇ ಪ್ರಥಮವಾಗಿ ಬಂಟ್ವಾಳದಲ್ಲಿ ಮನೆ ಅಡಿ ಸ್ಥಳದ ಸಕ್ರಮೀಕರಣ ಹಕ್ಕು ಪತ್ರ ವಿತರಣಾ ಸಮಾರಂಭ ವನ್ನು ಹಮ್ಮಿಕೊಂಡಿದ್ದೇವೆ. ಇಲ್ಲಿ ಸುಮಾರು 200 ಫಲಾನುಭವಿಗಳು ಯೋಜನೆಯ ಪ್ರಯೋಜನೆ ಪಡೆದಿದ್ದು ಜಿಲ್ಲೆಯಲ್ಲಿ 45 ಸಾವಿರ ಜನರಿಗೆ ಯೋಜನೆ ತಲುಪಲಿದೆ ಎಂದರು.
ರಾಜ್ಯದಲ್ಲಿ ಸುಮಾರು 4.41 ಲಕ್ಷ ಪೋಡಿ ಪ್ರಕರಣಗಳು ಬಾಕಿ ಇದ್ದು, 2016 ಮಾರ್ಚ್  ಒಳಗಾಗಿ ಕರ್ನಾಟಕ ರಾಜ್ಯವನ್ನು ಪೋಡಿ ಮುಕ್ತ ರಾಜ್ಯವನ್ನಾಗಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
3

2 (3)
ಬಈ ನಿಟ್ಟಿನಲ್ಲಿ 1700 ಸರ್ವೆಯರ್ಗಳಿಗೆ ತರಬೇತಿ ನೀಡಿ, ನೇಮಕಗೊಳಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ 53, ಉಡುಪಿ ಜಿಲ್ಲೆಗೆ 52 ಸರ್ವೆ ಯರ್ಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದರು.
ರಾಜ್ಯದಲ್ಲಿ ಈಗಾಗಲೇ 3.48 ಲಕ್ಷ ಅರ್ಜಿ ಯನ್ನು 94-ಸಿಯಡಿ ಸ್ವೀಕರಿಸಲಾಗಿದ್ದು, ಮುಂದಿನ 2016ರ ಮಾರ್ಚ್  3ರ ಒಳಗೆ ಇವರೆಲ್ಲರಿಗೂ ಮನೆಅಡಿ ಸ್ಥಳದ ಸಕ್ರಮೀಕರಣ ಹಕ್ಕುಪತ್ರವನ್ನು ನೀಡಲಾಗುವುದು ಎಂದ ಅವರು, ಕರ್ನಾಟಕ ರಾಜ್ಯದಲ್ಲೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ 200ಮಂದಿಗೆ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಇದಕ್ಕೆ ಮುತುರ್ವಜಿ  ವಹಿಸಿದ ಸಚಿವ ರಮಾನಾಥ ರೈ ಹಾಗೂ ಕಂದಾಯ ಅಧಿಕಾರಿಗಳನ್ನು ಅಭಿನಂದಿಸಿದರು.
ಇದೇ ಮಾದರಿಯನ್ನು ರಾಜ್ಯದ ಇತರ ಜಿಲ್ಲೆ ಹಾಗೂ ತಾಲೂಕುಗಳಲ್ಲಿಯೂ ಅನುಸರಿಸಲು ಸೂಚಿಸಲಾಗುವುದು ಎಂದ ಸಚಿವರು, ಸರಕಾರೀ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಇಲ್ಲಿನ ಜನಪ್ರತಿನಿಧಿಗಳ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರುದ್ರಭೂಮಿ ನಿರ್ಮಾಣಕ್ಕೆ ಸರಕಾರಿ ಜಮೀನು ಕಾದಿರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
9/11 ಸಮಸ್ಯೆಗೆ ಮಹತ್ವದ ಸಭೆ:
ಗ್ರಾಮೀಣ ಜನರನ್ನು ಕಾಡುತ್ತಿರುವ 9/11 ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮಂಗಳವಾರದಂದು (ಫೆ.10) ಕಂದಾಯ, ಗ್ರಾಮೀಣಾಭಿವೃದ್ಧಿ, ಅರಣ್ಯ, ನಗರಾಭಿವೃ
ದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಚಿವರನ್ನೊಳಗೊಂಡ ಮಹತ್ವದ ಸಭೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು, ಈ ಸಭೆಯಲ್ಲಿ 9/11 ಸಮಸ್ಯೆಯ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಅತಿಥಿಯಾಗಿ ಭಾಗವಹಿಸಿದ್ದ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರು ತಿಳಿಸಿದರು.
ಭೂಮಂಜೂರಾತಿ ಕಾಯಿದೆಯನ್ನು 94ಸಿಸಿಯಡಿ ನಗರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾಸ್ತವ್ಯ ಇರುವ ಫಲಾನುಭವಿಗಳಿಂದ ಶೀಘ್ರವೇ ಅರ್ಜಿ  ಸ್ವೀಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವ ವಿನಯ ಕುಮಾರ್ ಸೊರಕೆ ಅವರು, ಶೇ.50 ರಷ್ಟು ವಸತಿ ಹಾಗೂ ಶೇ.25ರಷ್ಟು ವಾಣಿಜ್ಯ ಕಟ್ಟಡಗಳ ನಕ್ಷೆ ಉಲ್ಲಂಘನೆ ಸಕ್ರಮಗೊಳಿಸುವ 2014 ಪರಿಷ್ಕೃತ ಅಕ್ರಮ ಸಕ್ರಮ ನಿಯಮಾವಳಿಗೆ ಹೈಕೋರ್ಟ್  ಒಪ್ಪಿಗೆ ನೀಡಿದ್ದು, ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಜಿಲ್ಲೆಯಲ್ಲಿನ ಮೂಲಗೇಣಿದಾರರ, ಕುಮ್ಕಿ ಹಕ್ಕಿನ ಸಮಸ್ಯೆಯನ್ನು ಪರಿಹರಿಸುವಂತೆ ಕಂದಾಯ ಸಚಿವರ ಮನವಿ ಮಾಡಿದರು. ಹಾಗೆಯೇ ಬಂಟ್ವಾಳದಲ್ಲಿ ನಿಮರ್ಿಸಲು ಉದ್ದೇಶಿಸಿದ ಮಿನಿ ವಿಧಾನ ಸೌಧಕ್ಕೆ ಈಗಾಗಲೇ 10 ಕೋಟಿ ರೂ. ಮಂಜೂರಾತಿ ಹಾಗೂ ಮಂಗಳೂರಿನ ಪಡೀಲಿನಲ್ಲಿ ಜಿಲ್ಲಾಡಳಿತ ಸಂಕೀರ್ಣ ನಿಮರ್ಾಣಕ್ಕೆ ಇರುವ ಅಡತಡೆಗಳನ್ನು ನಿವಾರಣೆಗೆ ಸಹಕರಿಸಿದ ಕಂದಾಯ ಸಚಿವರನ್ನು ಅಭಿನಂದಿಸಿದರು.
ಸಚಿವ ಅಭಯ ಚಂದ್ರ ಜೈನ್, ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಸದಸ್ಯರಾದ ನಳಿನಿ ಬಿ ಶೆಟ್ಟಿ, ಪ್ರಕಾಶ್ ಚಂದ್ರ ಶೆಟ್ಟಿ, ಎಂ.ಎಸ್.ಮಹಮ್ಮದ್, ಅಮ್ಟಾಡಿ ಗ್ರಾಪಂ ಅಧ್ಯಕ್ಷೆ ಬಬಿತಾ ಕೋಟ್ಯಾನ್, ತಾಪಂ ಸದಸ್ಯರಾದ ಎಫ್ರೆಮ್ ಡಿಸೋಜ, ಪದ್ಮಶೇಖರ ಜೈನ್, ರಮೇಶ್ ಕುಡ್ಮೇರು, ಮಾದವ ಮಾವೆ, ಪುರಸಭಾಧ್ಯಕ್ಷೆ ವಸಂತಿ ಚೆಂದಪ್ಪ, ಸದಸ್ಯ ವಾಸು ಪೂಜಾರಿ, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಡಿ.ಆರ್.ಅಶೋಕ್, ಉಪತಹಶೀಲ್ದಾರ್ಗಳಾದ ರೋಹಿನಾಥ್, ಸಾಧು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಪ್ರಸ್ತಾವಿಸಿ ಸ್ವಾಗತಿಸಿದರು.

ಬಂಟ್ವಾಳ ತಹಶೀಲ್ದಾರ್ ಮಹಮ್ಮದ್ ಇಸಾಕ್ ವಂದಿಸಿದರು. ಶಿಕ್ಷಕ ಜಯರಾಮ ನಿರೂಪಿಸಿದರು. ಇದೇ ವೇಳೆ ಮನೆ ಅಡಿ ಸ್ಥಳ ಸಕ್ರಮೀಕರಣಗೊಂಡ ತಾಲೂಕಿನ 200 ಮಂದಿಗೆ ಹಕ್ಕುಪತ್ರ, 10ಮಂದಿಗೆ ಮುಖ್ಯಮಂತ್ರಿ ಪರಿಹಾರ ಯೋಜನೆಯ, ರಾಷ್ಟ್ರೀಯ ಕುಟುಂಬ ಸಹಾಯ ನಿಧಿ ಯೋಜನೆಯಡಿ 26ಮಂದಿಗೆ ಚೆಕ್ ಹಾಗೂ ಸಾಮಾಜಿಕ ಭದ್ರತೆ ಯೋಜನೆಯಡಿ 405 ಮಂದಿಗೆ ವಿವಿಧ ಪಿಂಚಣಿಯ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.

By suddi9

Leave a Reply

Your email address will not be published. Required fields are marked *