ಬಂಟ್ವಾಳ : ತಾಲೂಕು ಎಲಿಯನಡುಗೋಡು ಗ್ರಾಮದಗೋಳಿತೊಟ್ಟು ಎಂಬಲ್ಲಿ ಚಿರತೆಯೊಂದು ಬೈಕ್ ಸವಾರರೋರ್ವರಿಗೆ ಕಾಣಿಸಿಕೊಂಡ ಫಟನೆ ಫೆ.6ರಂದು ರಾತ್ರಿ ಸಂಭವಿಸಿದೆ.
ಇಲ್ಲಿನ ರಾಜೇಶ್ ಶೆಟ್ಟಿ ಎಂಬವರು ಬೈಕ್ನಲ್ಲಿ ಸಾಗುತ್ತಿದ್ದಾಗ ಏಕಾಏಕಿ ಚಿರತೆಯೊಂದು ರಸ್ತೆಯಲ್ಲಿ ಕಂಡಿದ್ದು ಬೈಕ್ನ ದೀಪದ ಬೆಳಕಿಗೆ ಬೆದರಿದ ಚಿರತೆ ಪಕ್ಕದ ಕಾಡಿಗೆ ಓಡಿತ್ತು ಎನ್ನಲಾಗಿದೆ. ಶನಿವಾರ ಬೆಳಗ್ಗೆ ಗ್ರಾಮಸ್ಥರು ಸೇರಿ ಚಿರತೆಗಾಗಿ ಹುಡುಕಾಡಿದ್ದಾರೆ. ಅರಣ್ಯ ಇಲಾಖಾಕಾರಿಗಳು ಮತ್ತು ಸಿಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು ಚಿರತೆಯ ಯಾವುದೇ ಕುರುಹುಗಳು ಕಂಡುಬಂದಿಲ್ಲ ಅಗತ್ಯವಿದ್ದಲ್ಲಿ ಬೋನು ಇಡಲಾಗುವುದು ಎಂದು ತಿಳಿಸಿದ್ದಾರೆೆ