ವಾಮಂಜೂರು: ಶ್ರಮಿಕ ಸಂತ ಜೋಸೆಫರ ದೇವಾಲಯ ವಾಮಂಜೂರು ಇಲ್ಲಿ ದಿನಾಂಕ 18-02-2015 `ವಿಭೂತಿ ಬುಧವಾರ’ದಂದು ಯೇಸುಕ್ರಿಸ್ತರ ಶಿಲುಬೆಯ ಹಾದಿಯನ್ನು ಬಿಂಬಿಸುವ 14 ಸ್ಥಾನಗಳ ಉದ್ಘಾಟನೆಯನ್ನು ಶ್ರೀಮತಿ ಗ್ರೆಟ್ಟಾ ರೆಬೆಲ್ಲೊರವರು ನೆರವೇರಿಸಿದರು.
ಚರ್ಚಿನ ಗುರುಗಳಾದ ವಂದನೀಯಾ ಸಿಪ್ರಿಯನ್ ಪಿಂಟೊರವರು ಆರ್ಶಿರ್ವಚನಗೈದು ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಕಾಣಿಕೆಯನ್ನು ನೀಡಿದ ವಿಲ್ಪ್ರೆಡ್ ಮತ್ತು ಎಮ್ಮಾ ರೊಡ್ರಿಗಸ್ರವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ಚರ್ಚ್ನಾ ಸಹಾಯಕ ಗುರುಗಳಾದ ವಂದನೀಯ ಮೆಲ್ವಿನ್ ಡಿ’ಸೋಜ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಶನ್ ಎಮ್. ಕಾಮತ್, ಕಾರ್ಯದರ್ಶಿ ಜೋಕಿಂ ಡಿ’ಸೋಜ, ಹಾಗೂ ಜೆರಾಲ್ಡ್ ಮೊಂತೇರೊ ಉಪಸ್ಥಿತರಿದ್ದರು.








