ಸುದ್ದಿ9  ಕೈಕಂಬ:  ಮೌನ ಹಾಗೂ ಪ್ರತಿಭಟನೆ ಇಲ್ಲದಿರುವುದೇ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮೂಲ ಕಾರಣವಾಗಿದೆ. ಸಮಾಜ , ಕುಟುಂಬ, ಸಂಘ ಸಂಸ್ಥೆಗಳು ರ್ದೌಜನ್ಯ ತಡೆಯುವಲ್ಲಿ ಮಹತ್ವದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಬ್ರೇಕ್ ಥ್ರೂ ಸಂಸ್ಥೆಯ ಭರತ್ ಎಸ್ ಕರ್ಕೇರ ಹೇಳಿದರು.
ದಿಶಾ ಟ್ರಸ್ಟ್ (ರಿ) ಕೈಕಂಬ ಕಚೇರಿಯಲ್ಲಿ ಬ್ರೇಕ್ ಥ್ರೂ ಸಂಸ್ಥೆಯ ಸಹಯೋಗದೊಂದಿಗೆ ನಡೆದ “ಕೌಟುಂಬಿಕ ದೌರ್ಜನ್ಯ” ಮಾಹಿತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.

IMG_9714

IMG_9712
ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಅನುಸೂಯ ಕಾಜವ ಸಭಾಧ್ಯಕ್ಷತೆ ವಹಿಸಿದ್ದರು. ಸ್ಪಂದನ ಒಕ್ಕೂಟದ ಕಾರ್ಯದರ್ಶಿ ಸವಿತ ಕೊಳವೂರು, ದಿಶಾ ಸಂಸ್ಥೆಯ ನಿರ್ದೆಶಕರಾದ ಸಿಲ್ವೆಸ್ಟರ್ ಡಿ ಸೋಜ ಉಪಸ್ಥಿತರಿದ್ದರು. ದಿಶಾ ಸಂಸ್ಥೆಯ ಕ್ಷೇತ್ರ ಸಂಯೋಜಕ ರುದೇಶ್ ಸ್ವಾಗತಿಸಿ, ಕಿಲಿಂಜಾರು ನೇಸರ ಗ್ರಾಮ ಸಮಿತಿ ಅಧ್ಯಕ್ಷೆ ಮೋಹಿನಿ ವಂದಿಸಿದರು.

By suddi9

Leave a Reply

Your email address will not be published. Required fields are marked *