ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಷಷ್ಠಮವಾರ್ಷಿಕೋತ್ಸವವು ಮಾ.11ರಂದು ಬುಧವಾರದಂದು ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಚಂಡಿಕಾಹೋಮದೊಂದಿಗೆ ಪ್ರಾರಂಭಗೊಂಡಿತು. ಆಶ್ರಮದಲ್ಲಿ ಹೋಮ ಪೂಜಾ ವಿಧಿವಿಧಾನಗಳು ನೆರವೇರಿತು. ಮಧ್ಯಾಹ್ನ ಮಹಾಪೂಜೆ ಭಜನೆ ನಡೆಯಿತು.
ಮಹಿಳೆಯರಿಗೆ ಫಲ ತಾಂಬೂಲದೊಂದಿಗೆ ಸೀರೆ ಬಟ್ಟಲು ವಿತರಣೆ
ಚಂಡಿಕಾ ಹೋಮ

ಶ್ರೀ ರಾಜರಾಜೇರ್ಶವರೀ ಸಭಾಂಗಣದಲ್ಲಿ ಪೆರ್ಮಂಕಿ ಸುರೇಶ್ ಕಾರಂತ ಶಿಷ್ಯೆಯವರಿಂದ ಭರತನಾಟ್ಯಾ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಆಶ್ರಮದಲ್ಲಿ ಕಲಿಯುತ್ತಿರುವ ಮಕ್ಕಳಿಂದ ರತಿಕಲ್ಯಾಣ ಎಂಬ ಪೌರಾಣಿಕ ಯಕ್ಷಗಾನ ನಡೆಸಿಕೊಟ್ಟರು. ನಂತರ ಮಹಿಳೆಯರಿಗೆ ಜೀವಂತ ದುಗರ್ಾಪೂಜೆ ನೆರವೇರಿತು. ಸುಮಾರು 350 ಬಡ ಮಾತೆಯರಿಗೆ ಸೀರೆ ಅನ್ನ ತಟ್ಟೆ ಫಲತಾಂಬೂಳನ್ನಿತ್ತು ವಿತರಿಸಿದರು. 6.30ಕ್ಕೆ ಸಂಧ್ಯಾರತಿ ನಡೆಯಿತು













