ಸುದ್ದಿ9 ವಾಮಂಜೂರು: ಬದುಕಿನ ರಕ್ಷಣೆ ಮತ್ತು ಬದುಕುವ ಕಲೆ ಇದು ತಮ್ಮ ತಮ್ಮ ಕೈಯಲ್ಲಿರುತ್ತದೆ ಎಂದು ಸೈಂಟ್ ರೈಮಂಡ್ಸ್ ಪದವಿ ಕಾಲೇಜಿನಲ್ಲಿ ಮಾ.19 ಗುರುವಾರದಂದು ನಡೆದ ಮಹಿಳೆಯರ ಸ್ವರಕ್ಷಣೆ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾರ್ಟಿಯಲ್ ಅರ್ಟಿಸ್ಟ್ ಶ್ರೀಯುತ ಕಾರ್ತಿಕ್ ಕಟೀಲು ಇವರು ಅಭಿಪ್ರಾಯಪಟ್ಟರು.

ಸೈಂಟ್ ರೈಮಂಡ್ಸ್ ಕಾಲೇಜು ಎನ್.ಎಸ್.ಎಸ್ ಘಟಕದಿಂದ ನಡೆದ ಕಾರ್ಯಕ್ರಮದಲ್ಲಿ ಮಹಿಳೆ ಯಾವ ರೀತಿ ತನ್ನನ್ನೇ ತಾನು ರಕ್ಷಿಸಿಕೊಳ್ಳಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಕಾಲೆಜು ಪ್ರಾಂಶುಪಾಲರಾದ ವಂದನೀಯ ಸಿಸ್ಟರ್ ಸೆಲಿನ್ ವಾಸ್, ಶೋಭಲತಾ ಉಪಸ್ಥತರಿದ್ದರು.















