ಬಜ್ಪೆ: ಎಂಆರ್‍ಪಿಎಲ್ ಅಂಗಸಂಸ್ಥೆ ಒಎಂಪಿಎಲ್ ವೇತನ ನೀಡಿಕೆಯಲ್ಲಿ ಸ್ಥಳೀಯ ಉದ್ಯೋಗಿಗಳ ಮೇಲೆ ತಾರತಮ್ಯ ಧೋರಣೆ ತಳೆದಿದೆ ಹಾಗೂ ಇದಕ್ಕೆ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರೇ ಸಾಥ್ ನೀಡಿದ್ದಾಗಿ ಆರೋಪಿಸಿ ಕಂಪೆನಿಯ ನೂರಕ್ಕೂ ಅಧಿಕ ಉದ್ಯೋಗಿಗಳು ಕಳೆದೆರಡು ದಿನಗಳಿಂದ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
1

2

3

4

ಒಎಂಪಿಎಲ್ ಕಂಪೆನಿ ನಿರ್ಮಾಣ ಸಂದರ್ಭ ಸ್ಥಳೀಯ ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡಲಾಗಿತ್ತು. ಅದರಂತೆ ಸಂಸ್ಥೆಯಲ್ಲಿ ನೂರಾರು ಮಂದಿ ದುಡಿಯುತ್ತಿದ್ದಾರೆ. ಪ್ರಾರಂಭದಿಂದಲೇ ಇವರಿಗೆ ಕಮ್ಮಿ ವೇತನ ನೀಡುತ್ತಾ ಬಂದಿರುವ ಒಎಂಪಿಎಲ್ ವಿರುದ್ಧ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಸ್ಥಳೀಯ ಜಿಲ್ಲಾ ಪಂಚಾಯತ್ ಜನಪ್ರತಿನಿಧಿಗಳ ಜೊತೆ ಸಂಸದರನ್ನು ಭೇಟಿ ಮಾಡಿ ಚರ್ಚಿಸಿ ಪ್ಯಾಕೇಜ್ ವೇತನವನ್ನು ಹೆಚ್ಚಿಸಲಾಗಿತ್ತು. ಈ ವೇಳೆ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಮನವಿ ಕೊಡುವುದೆಂದು ಉದ್ಯೋಗಿಗಳು ಮುಂದಾಗಿದ್ದರೂ ಸಂಸದರು ಅವರನ್ನು ಸಮಾಧಾನಿಸಿ ವೇತನ ಹೆಚ್ಚಳ ಮಾಡಿಸುವುದಾಗಿ ಹೇಳಿದ್ದರು.

ಆದರೆ ಕೆಲವು ದಿನಗಳ ಹಿಂದೆ ಸಂಸ್ಥೆಯು ಮತ್ತೆ ವಾರ್ಷಿಕ ಪ್ಯಾಕೇಜ್ ನಲ್ಲಿ ಹೇಳಿದ್ದ 4.25 ಲಕ್ಷ ರೂ. ನೀಡದೆ 3 ಲಕ್ಷಕ್ಕೆ ದುಡಿಯಬೇಕೆಂದು ಒತ್ತಾಯಿಸಿ ಸಹಿ ನೀಡುವಂತೆ ಉದ್ಯೋಗಿಗಳನ್ನು ಕೇಳಿದ್ದು, ಈ ವೇಳೆ ಆಕ್ರೋಶಗೊಂಡ ಉದ್ಯೋಗಿಗಳು ಸಂಸದರನ್ನು ಸಂಪರ್ಕಿಸಿದ್ದರು. ಈ ವೇಳೆ ಸಂಸದರು ಅನುಚಿತವಾಗಿ ವರ್ತಿಸಿದ್ದಾರೆ ಮಾತ್ರವಲ್ಲದೆ ಪ್ರತಿಭಟನೆ ನಡೆಸಿದಲ್ಲಿ ಎಲ್ಲರನ್ನೂ ಜೈಲಿಗೆ ಹಾಕುವುದಾಗಿ ಬೆದರಿಸಿದ್ದಾರೆ ಎಂದು ಉದ್ಯೋಗಿಗಳು ಆರೋಪಿಸಿದ್ದಾರೆ.

ಇದೀಗ ಸೋಮವಾರದಿಂದ ಕೆಲಸ ನಿರ್ವಹಿಸದೆ ಒಎಂಪಿಎಲ್ ಸಂಸ್ಥೆಯ ಹೊರಗಡೆ ಉದ್ಯೋಗಿಗಳು ಧರಣಿ ನಡೆಸುತ್ತಿದ್ದಾರೆ. ಸಂಸ್ಥೆ ಎಂಆರ್‍ಪಿಎಲ್ ನಲ್ಲಿ ನಿರ್ವಸಿತ ಉದ್ಯೋಗಿಗಳಿಗೆ ನೀಡುವಷ್ಟು ವೇತನ ನೀಡದಿದ್ದರೆ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

By suddi9

Leave a Reply

Your email address will not be published. Required fields are marked *