ಬಂಟ್ವಾಳ :ಶ್ರೀ ಸದಾಶಿವ ಗಣಪತಿ ದೇವಸ್ಥಾನ ಈಶ್ವರಮಂಗಲ ಅನ್ನಪ್ಪಾಡಿ ಸಜಿಪ ಮುನ್ನೂರು ಇದರ ವಾರ್ಷಿಕ ಪೂಜೋತ್ಸವ ಇತ್ತೀಚೆಗೆ ವಿದ್ಯಕ್ತವಾಗಿ ಜರಗಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಗಣಪತಿ ದೇವಾಲಯದಲ್ಲಿ ಫಲಪಂಚಾಮೃತ ಅಭಿಷೇಕ , 12 ಕಾಯಿ ಗಣಹೋಮ , ಪ್ರಸನ್ನ ಪೂಜೆ ಏಕಾದಶ ರುದ್ರಾಭಿಷೇಕ, ಕಲ್ಪೋಕ್ತ ಪೂಜೆ , ಮಹಾಪೂಜೆ ಜರಗಿತು .

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಪೂಂಜ, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ , ದೇವಿಪ್ರಸಾದ್ ಪೂಂಜ , ಸದಾನಂದ ಶೆಟ್ಟಿ , ಜಯಶಂಕರ ಬ್ರಾಸಿತ್ತಾಯ, ಯೋಗೀಶ್ ಬೆಳ್ಚಾಡ , ಕೃಷ್ಣಮೂರ್ತಿ ಉಪಸ್ಥಿತರಿದ್ದರು.