ಯುವಶಕ್ತಿ ಅನಾವರಣಕ್ಕೆ ದೇಶಿಯ ಶಿಕ್ಷಣ ಪೂರಕ : ಡಾ ರಮಾನಂದ ಶೆಟ್ಟಿ
ಮೂಡುಬಿದರೆ: ಜಾಗತಿಕವಾಗಿ ತಂತ್ರಜ್ಞಾನ ಶಿಕ್ಷಣ ಅವಶ್ಯಕವೆನಿಸಿದರೂ ಯುವಕಶಕ್ತಿಯನ್ನು ರೂಪಿಸುವಲ್ಲಿ, ನಮ್ಮ ದೇಶದ ವ್ಯವಸ್ಥೆಗಳಿಗೆ ಪೂರಕವಾಗಿ ನಲಂದಾ, ತಕ್ಷಶಿಲಾ ಮಾದರಿಯಲ್ಲೇ ಅಧುನಿಕ ಶಿಕ್ಷಣ ನೀಡುವುದು ಅವಶ್ಯಕ. ಜೀವನಾವಶ್ಯಕತೆ ಮಾತ್ರವಲ್ಲ, ನಮ್ಮ ಸಾಮಥ್ರ್ಯದ ಅನಾವರಣಗೊಳಿಸಲು ಶಿಕ್ಷಣ ಅಗತ್ಯವಾಗುತ್ತದೆ. ವಿದ್ಯೆಯೇ ಮಾನವ ಶಕ್ತಿ. ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಣ ಸಂಸ್ಥೆಗಳು ಪ್ರಾಮುಖ್ಯತೆ ನೀಡಬೇಕೆಂದು ನಿಟ್ಟೆ ವಿವಿಯ ಉಪಕುಲಪತಿ ಡಾ ರಮಾನಂದ ಶೆಟ್ಟಿ ತಿಳಿಸಿದರು.
ರೋಟರಿ ಎಜ್ಯುಕೇಶನ್ ಸೊಸೈಟಿಯ ವತಿಯಿಂದ ಪ್ರಾರಂಭಿಸಲಾದ ರೋಟರಿ ಪದವಿಪೂರ್ವ ಕಾಲೇಜನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
mbd_june19_9
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಅಮರನಾಥ ಶೆಟ್ಟಿ ಮಾತನಾಡಿ ಪೋಷಕರ ಬೇಡಿಕೆಯಂತೆ ಪಿಯುಸಿ ಕಾಲೇಜು ಸ್ಥಾಪಿಸಿದ್ದು ವಿಜ್ಞಾನ ಮತ್ತು ವಾಣಿಜ್ಯ ವಿಭಾಗವನ್ನು ತೆರೆಯಲಾಗಿದೆ. ಮುಂದಿನ ವರ್ಷದಿಂದ ಸ್ವಂತ ಕಟ್ಟಡದಲ್ಲಿ ರೋಟರಿ ಪಿಯು ಕಾಲೇಜು ತರಗತಿಗಳು ನಡೆಯಲಿದ್ದು ಹಾಸ್ಟೆಲ್ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.
ರೋಟರಿ ಕ್ಲಬ್‍ನ ಅಧ್ಯಕ್ಷ, ಮಕ್ಕಳ ತಜ್ಞ ಡಾ. ಮುರಳೀಕೃಷ್ಣ ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆಯ ಕಾರ್ಯದರ್ಶಿ ನಾರಾಯಣ್ ಪಿ.ಎಂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ವಿನ್ಸೆಂಟ್ ಡಿಕೋಸ್ತಾ ರೋಟರಿ ಶಾಲೆಗಳು ನಡೆದು ಬಂದ ಹಾದಿಯನ್ನು ವಿವರಿಸಿದರು. ಸಂಚಾಲಕ ಡಾ ಯತಿಕುಮಾರ್ ಸ್ವಾಮಿ ಗೌಡ ವಂದಿಸಿದರು. ಗಜಾನನ ಮರಾಠೆ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಕಾಸ್ಸಿನ್ ರಾಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *