ಬಜ್ಪೆ: ಇಲ್ಲಿಗೆ ಸಮೀಪದ ಕಟೀಲು-ಬಲ್ಲಣ ಎಂಬಲ್ಲಿ ಖಾಸಗಿ ಸರ್ವಿಸ್ ಬಸ್ಸೊಂದು ವಾಹನಕ್ಕೆ ಸೈಡ್ ಕೊಡುವ ಸಂದರ್ಭ ಕಂದಕಕ್ಕೆ ಉರುಳಿಬಿದ್ದು 16 ಮಂದಿ ಗಂಭೀರ ಗಾಯಗೊಂಡ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ.

3b

1b

2b

1b

ವಾಮಂಜೂರಿನಿಂದ ಕಟೀಲು ಮಾರ್ಗವಾಗಿ ಕಿನ್ನಿಗೋಳಿ ಕಡೆಗೆ ಸಂಚರಿಸುವ ನೀಲ್ ರಾಜ್ ಹೆಸರಿನ ಖಾಸಗಿ ಬಸ್ ಬಲ್ಲಣದ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ತುತ್ತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಕಿನ್ನಿಗೋಳಿ ಆಸ್ಪತ್ರೆ ಹಾಗೂ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಜ್ಪೆ ಠಾಣಾ ಪೊಲೀಸರು ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *