ಶ್ರೀರಾಮ ಪದವಿಪೂರ್ವ ವಿದ್ಯಾಲಯದಲ್ಲಿ ಜು 22ರಂದು ಅಪರಾಹ್ನ 3.00ಗಂಟೆಗೆ ಭಗೀರಥ ಪಾರಂಪರಿಕ ಕೂಟವು ಉದ್ಘಾಟನೆಗೊಳ್ಳಲಿದೆ.
ಉಡುಪಿಯ ಸ್ನಾತಕೋತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಸುರೇಶ ಕೆ. ಇವರು ಉದ್ಘಾಟಿಸುವರು. ಭಾರತದ ಬಗ್ಗೆ ಐತಿಹಾಸಿಕ ಬರವಣಿಗೆಗಳು ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅಜಿತ ಕುಮಾರ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ. ಪ್ರಭಾಕರ ಭಟ್ ಉಪಸ್ಥಿತರಿರುವರು ಎಂದು ಪ್ರಾಚಾರ್ಯ ವಸಂತ ಬಲ್ಲಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.