ವಿಟ್ಲ: ಪತ್ರಕರ್ತರು ಸಮಾಜ ಎಂಬ ಕೆರೆಯಲ್ಲಿದ್ದು, ಮತ್ಯಸ್ಥದಂತೆ ಶುದ್ದೀಕರಿಸುವ ಕೆಲಸವನ್ನು ಮಾಡಬೇಕು.ಸಮಾಜ ಪರಿವರ್ತನೆಯಲ್ಲಿ ಮಾಧ್ಯಮದ ಪಾತ್ರ ಮಹತ್ವವಾಗಿದೆ. ಪತ್ರಕರ್ತಸೂರ್ಯನಂತೆ ಸಮಾಜಕ್ಕೆ ಬೆಳಕು ನೀಡುವವರಾಗಿರಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಬುಧವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದೊಂದಿಗೆ ನಡೆದ ಮಾಧ್ಯಮ ಸಮ್ಮೇಳನ 2015 ಉದ್ಘಾಟಿಸಿ ಆಶೀರ್ವಚನ ನೀಡಿದರು.
ಪತ್ರಕರ್ತರು ಮಧು ಮಕ್ಷಿಯಂತೆ ಮಕರಂದ ಇರುವ ಹೂವುಗಳಸಿಹಿಯನ್ನು ಹೆಕ್ಕಿಕೊಂಡು ಬೇರೆ ಯಾರಿಗೂ ತೊಂದರೆ ಕೊಡದೆ ಸಮಾಜಕ್ಕೆ ಸಿಹಿಯನ್ನು ಹಂಚುತ್ತಾರೆ. ಪತ್ರಕರ್ತರನ್ನು ಕೊಚ್ಚಿ ಕೊಲ್ಲುವಂತ ಹೀನಾಯ ಘಟನೆಗಳು ನಡೆಯುತ್ತಿದ್ದು, ಸಮಾಜದಲ್ಲಿ ಅವರಿಗೆ ಭದ್ರತೆ ಏನೆಂಬ ಪ್ರಶ್ನೆ ಕಾಡುತ್ತಿದೆಎಂದು ಆತಂಕ ವ್ಯಕ್ತಪಡಿಸಿದರು.
ಬೆಂಗಳೂರು ಹಿರಿಯ ಪತ್ರಕರ್ತ ಈಶ್ವರ ದೈತೋಟ ಮಾತನಾಡಿ ಜನರಿಗೆ ಬೇಕಾದ ತಂತ್ರಜ್ಞನದ ಸೃಷ್ಠಿಯಾಗಬೇಕಾಗಿದೆ.
ಸತ್ಯ ಮಾಹಿತಿಯನ್ನು ಪರಿಪೂರ್ಣವಾಗಿ ನೀಡುವ ಕೆಲಸ ನಡೆಯಬೇಕು ಅಡ್ಡಿ ಅಡಚಣೆ ಇಲ್ಲದ ಸ ಪತ್ರಕರ್ತರು ವೃತ್ತಿ ಪರತೆಯನ್ನು ಹೊಂದಿ .80 ಪತ್ರಿಕೆಗಳು ಬೆದರಿಕೆಯನ್ನು ಅನುಭವಿಸುತ್ತಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಪೊನ್ನಪ್ಪ ಮಾತನಾಡಿದರು.
ಈ ಸಂದರ್ಭ ಹೊಸದಿಗಂತ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಪ್ರಕಾಶ್, ದ ಕ ಜಿಲ್ಲಾ ಕಾರ್ಯನಿರತ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.ರೇಣುಕಾ ಎಸ್ ರೈ ಪ್ರಾರ್ಥಿಸಿದರು. ಮಾಧ್ಯಮ ಸಮ್ಮೇಳನ ಸಮಿತಿ ಅಧ್ಯಕ್ಷ ಮಲಾರು ಜಯರಾಮ ರೈ ಸ್ವಾಗತಿಸಿದರು. ಮಂಗಳೂರು ಆಕಾಶವಾಣಿ ಸಹಾಯಕ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಪ್ರಸ್ತಾವನೆಗೈದರು.ಪ್ರಧಾನ ಕಾರ್ಯದರ್ಶಿ ನಿಶಾಂತ್ ಬಿಲ್ಲಂಪದವು ವಂದಿಸಿದರು. ಸಂಚಾಲಕ ಉದಯಶಂಕರ್ ನೀರ್ಪಾಜೆ ಕಾರ್ಯಕ್ರಮ ನಿರೂಪಿಸಿದರು.
