ಬಂಟ್ವಾಳ : ಛಾಯಾಗ್ರಾಹಕರು ಬಿಡುವಿನ ಸಮಯದಲ್ಲಿ ಕ್ರಿಯಾಶೀಲರಾಗಿ ಸಂಘಟನೆಯ ಮೂಲಕ ಸಾಮಾಜಿಕ ಸೇವೆಯನ್ನು ಮಾಡಬೇಕು . ಸಮಾಜದಲ್ಲಿ ಎಸ್.ಕೆ.ಪಿ.ಎ ಪ್ರಬಲ ಸಂಘಟನೆಯಾಗಿ ಮೂಡಿ ಬಂದಿದೆ. ಈ ವರ್ಷ ನಡೆಯುವ ರಜತ ಸಂಭ್ರಮ ಛಾಯಾಕುಟುಂಬದ ಹಬ್ಬವಾಗಬೇಕು ಎಂದು ಎಸ್.ಕೆ.ಪಿ.ಎ. ಜಿಲ್ಲಾಧ್ಯಕ್ಷರಾದ ಕೆ.ವಾಸುದೇವರಾವ್ ಹೇಳಿದರು.

DSC_4268
ಅವರು ಬಂಟ್ವಾಳ ಲಯನ್ಸ್ ಸೇವಾ ಮಂದಿರ ದಲ್ಲಿ ನಡೆದ ಬಂಟ್ವಾಳ ವಲಯದ 16ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಛಾಯಾಗ್ರಾಹಕರ ಮುಂದಿನ ಹೆಜ್ಜೆಗಳತ್ತ ವಿಚಾರ ವಿನಿಮಯ ನಡೆಸಿದರು. ಸಭೆಯ ಅಧ್ಯಕ್ಷತೆಯನ್ನು ಬಂಟ್ವಾಳ ವಲಯದ ಅಧ್ಯಕ್ಷ ಆನಂದ ಎನ್. ವಹಿಸಿ , ನೂತನ ಅಧ್ಯಕ್ಷರನ್ನು ಮತ್ತು ಪದಾಧಿಕಾರಿಗಳನ್ನು ನೇಮಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮಿತಿಯ ಪ್ರ.ಕಾರ್ಯದರ್ಶಿ  ಮಧು ಮಂಗಳೂರು ಕೋಶಾಧಿಕಾರಿ ಜಗನ್ನಾಥ ಶೆಟ್ಟಿ ಮಂಗಳೂರು , ವಲಯದ ಗೌರವಾಧ್ಯಕ್ಷ ದಯಾನಂದ ಬಿ. ಉಪಸ್ಥಿತರಿದ್ದರು. ಕಾರ್ಯದರ್ಶಿ  ರಾಜೇಂದ್ರ ವರದಿ ವಾಚಿಸಿದರು. ಕೋಶಾಧಿಕಾರಿ ಜಯಂತ್ ನಯನಾಡು ಲೆಕ್ಕಪತ್ರ ಮಂಡಿಸಿದರು. ಹರೀಶ್ ಮಾಣಿ ಕ್ರೀಡಾ ವರದಿ ನೀಡಿದರು. ನಿಯೋಜಿತ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಮತ್ತು ಕಾರ್ಯದರ್ಶಿ  ಹರೀಶ್ ಕುಂದರ್ ವೇದಿಕೆಯಲ್ಲಿದ್ದರು. ಹರೀಶ್ ರಾವ್ ಸ್ವಾಗತಿಸಿ , ಸಂತೋಷ್ ಮಂಚಿ ವಂದಿಸಿ, ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *