ಬಂಟ್ವಾಳ: ಕಳೆದ ಬಾನುವಾರ ಮನೆಯಿಂದ ನಾಪತ್ತೆಯಾಗಿದ್ದ ಸಜೀಪಮೂಡ ಗ್ರಾಮದ ಸುಭಾಷ್ನಗರದ ಯುವತಿ ಜಯಂತಿ ಪತ್ತೆಯಾಗಿದ್ದಾಳೆ.
ಕಾವಳಪಡೂರು ಗ್ರಾಮದ ವಗ್ಗದಲ್ಲಿರುವ ದೂರದ ಸಂಬಂಧಿಗಳ ಮನೆಗೆ ತೆರಳಿದ್ದ ಯುವತಿಯನ್ನು ಪತ್ತೆ ಹಚ್ಚಿದ ಬಂಟ್ವಾಳ ನಗರ ಪೊಲೀಸರು ತಾಯಿಯೊಂದಿಗೆ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.
ಶನಿವಾರ ರಾತ್ರಿ ಮಲಗಿದ್ದ ಯುವತಿ ಭಾನುವಾರ ಬೆಳಿಗ್ಗೆ ನಾಪತ್ತೆಯಾಗಿದ್ದಳು. ಎಲ್ಲೂ ಕಂಡು ಬಾರದೇ ಇದ್ದಾಗ ತಾಯಿ ಸೀತಾ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಯುವತಿಯನ್ನು ಪತ್ತೆ ಹಚ್ಚಿದ ಪೊಲೀಸರು ಯುವತಿಯನ್ನು ವಿಚಾರಿಸಿದಾಗ ತಾಯಿಯ ಕಿರುಕುಳದಿಂದ ಬೇಸತ್ತು ಸಂಬಂಧಿಕರ ಮನೆಗೆ ಹೋಗಿರುವುದಾಗಿ ತಿಳಿಸಿದ್ದಾಳೆ.