ಬಂಟ್ವಾಳ : ತಾಲೂಕು ಮೂಡುನಡುಗೋಡು ಕರೆಂಕಿ ಶ್ರೀ ದುರ್ಗಾ  ಫ್ರೆಂಡ್ಸ್ ಕ್ಲಬ್ ವತಿಯಿಂದ ಕ್ಲಬ್ ಹಮ್ಮಿಕೊಂಡಿರುವ ನಮ್ಮ ಆದ್ಯತೆ ನಮ್ಮ ಸ್ವಚ್ಛತೆ ಎಂಬ ತಿಂಗಳ ಕಾರ್ಯಕ್ರಮ ಪ್ರಯುಕ್ತ ಪರಿಸರ ನೈರ್ಮಲ್ಯ ಮತ್ತು ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ರಾಯಿ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ಜು.26ರಂದು ಜರಗಿತು.
2707pkt5A

2707pkt5

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಸಂಜೆ ನಡೆದ ಸಮಾರೋಪದಲ್ಲಿ ನಿವೃತ್ತ ಶಿಕ್ಷಕ ಸೋಮಪ್ಪ ಮಡಿವಾಳ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಶಾಲಾ ಪರಿಸರವನ್ನು ನೈರ್ಮಲ್ಯಗೊಳಿಸಿ ಶಿಕ್ಷಣಕ್ಕೆ ಸಹಕಾರ ನೀಡಿ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅನುಕರಣೀಯರು.  ನಮ್ಮೂರಿನ ಶಾಲೆ ನಮ್ಮ ಶಾಲೆ ಎಂಬ ಭಾವನೆ ಬಂದಾಗ ಶಾಲಾಭಿವೃದ್ಧಿಯಾಗುವುದು ಎಂದು ಹೇಳಿದರು. ಶಾಲಾ ಮುಖ್ಯಶಿಕ್ಷಕ ಜಯರಾಮ ಪಡ್ರೆ ಅವರು ಮಾತನಾಡಿ ಸರಕಾರಿ ಶಾಲೆಗಳನ್ನು ಸುಸಜ್ಜಿತಗೊಳಿಸಿದಾಗ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ ಸಾಧ್ಯವಾಗುವುದು. ಕ್ಲಬ್ನ ಕಾರ್ಯಕ್ರಮಗಳು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

ರಾಯಿ ಗ್ರಾ.ಪಂ.ಅಧ್ಯಕ್ಷ ದಯಾನಂದ ಸಪಲ್ಯ , ಸದಸ್ಯರಾದ ಹರೀಶ್ ಆಚಾರ್ಯ, ಪದ್ಮನಾಭ ಗೌಡ, ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ಅಧ್ಯಕ್ಷ ಹೇಮಚಂದ್ರ ಶೆಟ್ಟಿಗಾರ್, ರಾಯಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ  ಸದಾನಂದ ಗೌಡ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಬೆಟ್ಟು ರಾಯಿ, ಶಾಲಾಭಿವೃದ್ಧಿ ಸಮಿತಿ ಸದಸ್ಯ ರಮೇಶ್ ಗೌಡ, ಶಿಕ್ಷಕ ವಸಂತ, ಸ್ಥಳೀಯ ಪ್ರಮುಖ ಪ್ರಭಾಕರ ರಾಯಿ, ಶ್ರೀ ದುರ್ಗಾ  ಫ್ರೆಂಡ್ಸ್ ಕ್ಲಬ್ ನ  ಪದಾಕಾರಿಗಳಾದ ವಿನೋದ್ ಕರೆಂಕಿ, ನವೀನ್ ಸೇಸಗುರಿ, ಬಾಲಕೃಷ್ಣ ಕುಲಾಲ್, ನೋಣಯ್ಯ ಪೂಜಾರಿ, ಯಶೋಧರ ಪೂಜಾರಿ, ಶೇಖರ ಅಂಚನ್, ಬಾಲಕೃಷ್ಣ ಗೌಡ, ರಾಮಚಂದ್ರ ಕರೆಂಕಿ, ಸಂತೋಷ್, ದಿನೇಶ್, ಜನಾರ್ಧನಗೌಡ, ಭಾಸ್ಕರ ಕುಲಾಲ್, ಗೋಪಾಲಕೃಷ್ಣ ಕಡಂಬಳಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ ಅಂಚನ್ ಅವರು ಸ್ವಾಗತಿಸಿ ಪ್ರಸ್ತಾವಿಸಿ ಮಾತನಾಡಿ ಪರಿಸರ ನೈರ್ಮಲ್ಯ , ಸ್ವಚ್ಛತೆಗೆ ಕ್ಲಬ್ ಆದ್ಯತೆ ನೀಡಿದ್ದು ಪ್ರತೀ ತಿಂಗಳು ಒಂದೆಡೆ ಶ್ರಮದಾನ ನಡೆಸುತ್ತೇವೆ. ಇದಕ್ಕೆ ತಗಲುವ ಖರ್ಚು  ವೆಚ್ಚಗಳನ್ನು ಸಂಘದಿಂದ ಭರಿಸಲಾಗುವುದು ಎಂದು ಹೇಳಿದರು. ಪುರುಷೋತ್ತಮ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ದುರ್ಗಾ  ಫ್ರೆಂಡ್ಸ್ಕ್ಲಬ್ನ 40 ಮಂದಿ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿ 1.84 ಸೆಂಟ್ಸ್ ವಿಸ್ತೀರ್ಣದ ಶಾಲೆಯ ಆವರಣದ ಗಿಡಗಂಟಿಗಳನ್ನು ಯಂತ್ರದ ಮೂಲಕ ತೆಗೆದು ಸ್ವಚ್ಛಗೊಳಿಸಿದರು. ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಿದರು. ಶಾಲೆಯ ಆಂಶಿಕ ತಡೆಗೋಡೆ ಮತ್ತು ಶೌಚಾಲಯಕ್ಕೆ ಸಾಗುವ ದಾರಿಯಲ್ಲಿ ಕಲ್ಲು , ಸಿಮೆಂಟ್ ಬಳಸಿ ಮೆಟ್ಟಿಲುಗಳನ್ನು ರಚಿಸಿದರು. ಶಾಲೆಯ ಪಕ್ಕ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರದ ಗೆಲ್ಲುಗಳನ್ನು ಕಡಿಯಲಾಯಿತು. ಶಾಲೆಯ ಡೆಸ್ಕ್ , ಮೇಜು ಸಹಿತ ಅವಶ್ಯವಿರುವ ಪೀಠೋಪಕರಣಗಳು, ಬಾಗಿಲು, ಕಿಟಕಿಗಳ ಚಿಲಕಗಳನ್ನು ದುರಸ್ತಿಗೊಳಿಸಲಾಯಿತು. ಅಕ್ಷರ ದಾಸೋಹದ ಕೊಠಡಿಗೆ ವಯರಿಂಗ್ ನಡೆಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ನೀರಿನ ಸೌಲಭ್ಯದ ಪೈಪ್ಲೈನ್ ದುರಸ್ತಿಗೊಳಿಸಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿದರು. ಶಾಲಾ ಆಟದ ಮೈದಾನ ಸಮತಟ್ಟುಗೊಳಿಸಿದರು.

By suddi9

Leave a Reply

Your email address will not be published. Required fields are marked *