ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮಕ್ಕೆ ಸಂಭಂದಿಸಿದ ಕಲ್ಕುಟ, ಕಿನ್ನಿಗುಡ್ಡೆ , ಪುಂಚಮೆ ಭಾಗದ ಜನರಿಗೆ ಕುಡಿಯುವ ನೀರನ ಸಮಸ್ಯೆಯನ್ನು ನೀಗಿಸಲು ಪುದು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರೀ ಕೆ.ಎ. ಅವರು ಆ.,3ರಂದು ಸೋಮವಾರ ಕುಡಿಯುವ ನೀರಿನ ಟ್ಯಾಂಕ್ ಸಾಣೂರುಪದವಿನಲ್ಲಿ ಉದ್ಘಾಟಿಸಿದರು.

ಟ್ಯಾಂಕ್ ನಿರ್ಮಿಸಲು 6 ಲಕ್ಷ ವೆಚ್ಚದಲ್ಲಿ 52ಸಾವಿರ ಲೀಟರ್ ನೀರಿನ ಸಾಮಥ್ರ್ಯ ಹೊಂದಿರುವ ಟ್ಯಾಂಕ್ ಗೆ ಅನುಧಾನವನ್ನು ಮಂಜೂರು ಮಾಡಿ ಅದರ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ, ಪಿಡಿಓ ನವೀನ್ ಭಂಡಾರಿ, ಕಾರ್ಯದರ್ಶಿ ಪದ್ಮ ನಾಯಕ್, ಕರಿಯಂಗಳ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪುಂಚಮೆ ಚಂದ್ರಶೇಖರ ರಾವ್ , ಮಾಜಿ ತಾಲೂಕು ಪಂಚಾಯತ್ ಸದಸ್ಯ ವೆಂಕಟೇಶ್ ನಾವಡ, ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಭರಣಿ, ಕೀಶೋರ್ ಕುಲಾಲ್, ಸುರೇಶ್ ಮಣಿಕಂಠಪುರ, ಇಬ್ರಾಹಿಂ ನವಾಜ್, ರಂಜಿನಿ ಹಾಗೂ ಗುತ್ತಿಗೆದಾರ ಯಶೋಧರ ಕಲ್ಕಟ , ಯಶವಂತ ಪೊಳಲಿ, ರೋಶನ್ ಪಲ್ಲಿಪಾಡಿ, ವಿಶ್ವನಾಥ ಸಾಣೂರುಪದವು ಮತ್ತಿತರರು ಉಪಸ್ಥಿತರಿದ್ದರು.





