ಕೈಕಂಬ: ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರದ ಮೂಲಭೂತ ಸೌಕರ್ಯವಾದ ರಸ್ತೆ, ನೀರು, ಆರೋಗ್ಯ ಮೊದಲಾದ ಸೇವೆಯನ್ನು ಒದಗಿಸುವುದೇ ಸಿದ್ದರಾಮಯ್ಯ ಸರಕಾರದ ಗುರಿ. ಬಡವರಿಗೆ ಉಚಿತ ಅಕ್ಕಿಯನ್ನು ನೀಡಿ, ಭಾರತದೇಶದ ಮೊದಲ ಮುಖ್ಯಮಂತ್ರಿ ಎಂಬ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ ಎಂದು ಸಾಮಾನ್ಯ ಸಚಿವರಾದ ಅಭಯಚಂದ್ರ ಜೈನ್ ಹೇಳಿದರು.
ಅವರು ಇತ್ತೀಚೆಗೆ ಗಂಜಿಮಠ ಗ್ರಾಮ ಪಂಚಾಯತ್‍ನ ಸಭಾಭವನದಲ್ಲಿ ಅಧ್ಯಕ್ಷರಾದ ಮಾಲತಿ, ಉಪಾಧ್ಯಕ್ಷರಾದ ಆರ್.ಎಸ್.ಝಕೀರ್ ಇವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
1

2
ಸ್ಥಳೀಯ ಶಾಸಕ ಮೊಯಿದಿನ್ ಬಾವ ಅಧ್ಯಕ್ಷತೆ ವಹಿಸಿ ಅದ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಿ, ಮಾತನಾಡಿ ಗಂಜಿಮಠ ಪಂಚಾಯತ್‍ನಲ್ಲಿ 31 ಸದಸ್ಯರಿದ್ದು ಪಕ್ಷಭೇದ ಮರೆತು ಈ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕೆ ನನ್ನ ತುಂಬು ಹೃದಯದ ಕೃತಜ್ಞತೆಗಳು, ನನ್ನ ಇಡೀ ಕ್ಷೇತ್ರದಲ್ಲಿ ನಾನು ಕೂಡ ಪಕ್ಷಭೇದ ಮರೆತು ಕಳೆದ ಎರಡು ವರ್ಷದಲ್ಲಿ ಕೆಲಸ ಮಾಡಿದ್ದೇನೆ. ಸರಕಾರ ಎಲ್ಲಾ ಇಲಾಖೆಗಳಿಂದ ಸಿಗುವ ಸವಲತ್ತಾಗಲೀ, ಶಾಸಕನಿಧಿಯಿಂದ ಲೋಕೋಪಯೋಗಿ ಇಲಾಖೆ ಹಾಗೂ ಮುಖ್ಯಮಂತ್ರಿ ಸಡಕ್ ಯೋಜನೆ, ರಾಜ್ಯಸಭಾ ಸದಸ್ಯ ಆಸ್ಕರ ಫೆರ್ನಾಂಡಿಸ್‍ರವರ ಅನುದಾನ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಾಗೂ ಇನ್ನೂ ನನ್ನ ಕ್ಷೇತ್ರದ ದೇವಸ್ಥಾನ, ಮಸೀದಿ, ಚರ್ಚ್‍ಗಳಿಗೆ ತಾರತಮ್ಯವಿಲ್ಲದೆ ಅನುದಾನವನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದೇನೆ. ಮಾನ್ಯ ಅಭಯಚಂದ್ರ ಜೈನ್ ಕೂಡಾ ಗಂಜಿಮಠಕ್ಕೆ ರೂ.10 ಲಕ್ಷ ರೂಪಾಯಿಯ ಮೀನಿನ ಮಾರ್ಕೆಟನ್ನು ಮಂಜೂರು ಮಾಡಿರುತ್ತಾರೆ ಎಂದು ಹೇಳಿದರು.
ಮೂಡಬಿದ್ರೆ ಪುರಸಭಾ ಅಧ್ಯಕ್ಷೆ ರೂಪ, ಮೂಡಬಿದ್ರೆ ನಗರಪ್ರಾಧಿಕಾರದ ಅಧ್ಕಕ್ಷ ಸುರೇಶ್ ಕೋಟ್ಯಾನ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ ಪೃಥಿರಾಜ್, ತಾಲೂಕು ಪಂಚಾಯತ್ ಸದಸ್ಯರಾದ ವಿಜಯಲಕ್ಷ್ಮೀ ಶೆಟ್ಟಿ, ಸೆಲಿನ್ ಫೆರ್ನಾಂಡೀಸ್, ಮಾಜೀ ತಾಲೂಕು ಪಂಚಾಯತ್ ಸದಸ್ಯರಾದ ನೋರ್ಬರ್ಟ್ ಮಥಾಯಿಸ್, ಉದ್ಯಮಿಗಳಾದ ಸತೀಶ್‍ಚಂದ್ರ ಸಾಲ್ಯಾನ್, ನೌಷದ್ ಹಾಜಿ, ಮಾಜೀ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಸಮಯೋಚಿತವಾಗಿ ಮಾತನಾಡಿದರು. ಅಬ್ದುಲ್ ಹಮೀದ್ ಕಾರ್ಯಕ್ರಮ ನಿರ್ವಹಿಸಿದರು. ಪಂಚಾಯತ್ ಸದಸ್ಯರಾದ ಜಿ.ಸುನೀಲ್ ಎಲ್ಲರನ್ನು ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *