ಹೆಜಮಾಡಿ : ಹೆಜಮಾಡಿ ಕೋಡಿ ಜಿಡ್ಡು ಶಿವ ಸಂಪದ ಮನೆ ಶಿವಪ್ಪ ಎಂ.ಸಾಲ್ಯಾನ್ (87.) ಅವರು ವೃದ್ಧಾಪ್ಯದಿಂದ ಕಳೆದ ರವಿವಾರ (ಆ.09) ರಂದು ನಿಧನರಾದರು. ಸಮಾಜಪರ ಚಿಂತಕರಾಗಿದ್ದ ಶಿವಪ್ಪ ಸಾಲ್ಯಾನ್ ಅವರು ಮೂಲ್ಕಿ ಅಲ್ಲಿನ ಹೆಜಮಾಡಿ ಕೋಡಿ ಬಿಲ್ಲವ ಶ್ರೀ ವಿಠೋಬಾ ಭಜನಾ ಮಂದಿರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನಾನುರೆಣಿಸಿದ್ದರು. ಮೃತರು ಪತ್ನಿ, ಬ್ಯಾಂಕ್‍ನ ಉಪ ಪ್ರಧಾನ ಪ್ರಬಂಧಕರೂ ಹಾಗೂ ಅಭಿವೃದ್ಧಿ ಮುಖ್ಯಸ್ಥ ಮೋಹನ್‍ದಾಸ್ ಹೆಜಮಾಡಿ ಸಹಿತನಾಲ್ವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ದಿವಂಗತ ಶಿವಪ್ಪ ಸಾಲ್ಯಾನ್‍ರಿಗೆ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್, ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಮತ್ತು ಆಡಳಿತ ನಿರ್ದೇಶಕ ಸಿ.ಆರ್.ಮೂಲ್ಕಿ ಹಾಗೂ ಬ್ಯಾಂಕ್‍ನ ನಿರ್ದೇಶಕ ಮಂಡಳಿ, ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.