ಕಟೀಲು: ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಳದ ವಠಾರದಲ್ಲಿ ಆ. 28 ರಿಂದ 30 ರ ವರೆಗೆ ಜರಗಲಿರುವ 20ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಶಿಕ್ಷಣ ಸಿದ್ದಾಂತಿ ಡಾ.ಎನ್ ಸುಕುಮಾರ ಗೌಡ ಆಯ್ಕೆಯಾಗಿದ್ದಾರೆಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರರವರು ಕಿನ್ನಿಗೋಳಿಯ ಯುಗಪುರುಷದಲ್ಲಿ ಜರಗಿದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು.
ಹಿರಿಯ ಶಿಕ್ಷಣ ತಜ್ಷರಾದ ಪುತ್ತೂರಿನ ಡಾ ಎನ್ ಸುಕುಮಾರ್ ಗೌಡರವರು ಬನಾರಸ್ ವಿಶ್ವ ವಿದ್ಯಾಲಯದಲ್ಲಿ ಎಂ ಎ ಪದವಿ ಹಾಗೂ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಎಂ.ಇಡಿ ಪದವಿಯನ್ನು ಪಡೆದಿದ್ದು ಕೆನಡಾದ ಕ್ವೀನ್ಸ್ ವಿ ವಿಯಿಂದ ಎಂ ಇಡಿ,ಟೊರೊಂಟೋ ವಿ ವಿ ಯಿಂದ ಪಿ ಎಚ್ ಡಿ ಪಡೆದಿದ್ದಾರೆ.ಅನೇಕ ಉಪಯುಕ್ತ ಹಾಗೂ ಮೌಲ್ಯಾಧರಿತ ಪುಸ್ತಕಗಳನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆದು ಪ್ರಕಟಿಸಿದ್ದಾರೆ. “” ಮಗು ಮನೆಯಿಂದ ಶಾಲೆಗೆ”,”ಕಲಿP”,” ಗುಣಶೋಧ” ಎಂಬ ಶಿಕ್ಷಣ ಚಿಂತನಗಳುಳ್ಳ ಪುಸ್ತಕ,ಇಂಗ್ಲೀಷ್ ಭಾಷೆಯಲ್ಲಿ ಪ್ರಾಬ್ಲೆಮ್ಸ್ ಆಂಡ್ ಪ್ರೊಸ್ಪೆಕ್ತ್ಸ್ ಆಫ್ ಅವರ್ ಎಜುಕೇಶನ್ (ಡಾ ಶಿವರಾಮ ಕಾರಂತರಿಂದ “”ನಮ್ಮ ಶಿಕ್ಷಣ ಪದ್ದತಿಯ ಸಮಸ್ಯೆಗಳೂ,ಭವಿಷ್ಯವೂ ” ಎನ್ನುವ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದವಾಗಿದೆ.ಲ್ಯಾಂಗ್ವೇಜ್ ಫಾರ್ ಡಾಕ್ಟರ್ಸ್ ,ಬೇಸಿಕ್ ಇಂಗ್ಲೀಷ್ ಹ್ಯಾಂಡ್ ಬುಕ್ ಪಾರ್ ಬಿಗಿನರ್ಸ್,ಬೇಸಿಕ್ ಇಂಗ್ಲೀಷ್ ಎ ಹ್ಯಾಂಡ್ ಬುಕ್ ಫಾರ್ ಸ್ಟುಡೆಂಟ್ಸ್ ಲರ್ನಿಂಗ್ ಆಂಡ್ ದ ಹಾರ್ನರ್ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ.ಇವರ ಬಗ್ಗೆ ಕಾಂತಾವರ ಕನ್ನಡಸಂಘವು 2014ರಲ್ಲಿ ಶೀಕ್ಷಣ ಸಿದ್ದಾಂತಿ ಡಾ ಎನ್ ಸುಕುಮಾರ ಗೌಡ ಎನ್ನುವ ವ್ಯಕ್ತಿ ಚಿತ್ರಣ ಹೊತ್ತಗೆಯನ್ನು ಪ್ರಕಟಿಸಿದೆ.
ಕೆನಡ ಕಿಬೆಕ್ ಪ್ರಾಂತ್ಯದ ರೀಡಿಂಗ್ ಅಸೋಸಿಯೇಶನ್ ದತ್ತಿ ನಿಧಿ ಪ್ರಶಸ್ತಿ,ಕೆನಡಾ ಕೌನ್ಸಿಲ್ ನ ಫೆಲೋಶಿಫ್,ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ,ಪುರಸ್ಕಾರಗಳನ್ನು ಪಡೆದಿದ್ದು 1975ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಕೆನಡಾ ದೇಶಕ್ಕೆ ತರಳಿದ ಅವರು ಪ್ರಾಥಮಿಕ ಹಂತದಿಂದ ಸ್ನಾತಕ್ಕೋತ್ತರ ಹಂತದವರೆಗೆ 112 ವರ್ಷಗಳ ಅವಧಿಯ ಅಧ್ಯಾಪನ,ಅಧ್ಯಯನವನ್ನು ನಡೆಸಿದ್ದಾರೆಂದು ತಿಳಿಸಿದರು. ಆ. 28ರಿಂದ 30 ರವರೆಗೆ ಕಟೀಲಿನಲ್ಲಿ ಜರಗಲಿರುವ 20ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ದೇವಳದ ವಠಾರದಲ್ಲಿ ಸರಳ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ,ಸರಸ್ವತಿ ಸದನದಲ್ಲಿ ಸಭಾ ಕಾರ್ಯಕ್ರಮ ಹಾಗೂ ಇತರ ಕಾರ್ಯಕ್ರಮಗಳಿಗೆ ಮತ್ತು ಕಟೀಲು ದೇವಳ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಲಿದ್ದು ಯಕ್ಷಗಾನದ ಪರಿಕರಗಳ,ಮುಖವಾಡಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಕಾರ್ಯವಾಗಲಿದೆಯೆಂದು ಅವರು ತಿಳಿಸಿದರು.
ಕಿನ್ನಿಗೋಳಿಯ ಯುಗಪುರುಷದ ಕೆ ಭುವನಾಭಿರಾಂ ಉಡುಪ,ಪೊಳಲಿ ನಿತ್ಯಾನಂದ ಕಾರಂತ,ಸಾಹಿತಿ ಎನ್ ಪಿ ಶೆಟ್ಟಿ ಉಪಸ್ತಿತರಿದ್ದರು.