ಕಿನ್ನಿಗೋಳಿ: ಬೆಂಗಳೂರಿನ ಮಹಾ ಬೋಧಿ ಸೊಸೈಟಿಯವರು 2604ರ ಧಮ್ಮಚಕ್ಕಪವತ್ತನ ಉತ್ಸವದ ದಿನ ಪೂಜ್ಯ ಕಸ್ಸಪ ಮಹಾಥೇರ ಅವರು ಉದಯಕುಮಾರ ಹಬ್ಬು ಅವರನ್ನು ಜು.31ಭಾನುವಾರ ಸನ್ಮಾನಿಸಿದರು. ಉದಯಕುಮಾರ ಹಬ್ಬು ಅವರು `ಅಂಗುತ್ತರ ನಿಕಾಯ’ ವನ್ನು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದರ. ಇದರ ಗೌರವಾರ್ಥ ಹಬ್ಬು ಅವರನ್ನು ಸನ್ಮಾನಿಸಲಾಯಿತು.

ಈ `ಅಂಗುತ್ತರ ನಿಕಾಯ’ವು ಇಂದಿನ ಭಾಷೆಯಲ್ಲಿ ಹೇಳುವುದಾದರೆ ಒಂದು ಮನೋಶಾಸ್ತ್ರ ವಾಗಿದೆ. ಇಂದಿನ ದುಗುಡ ದುಮ್ಮಾನದ ಒತ್ತಡದ ಕಾಲದಲ್ಲಿ ಬುದ್ಧರ ಬೋಧನೆಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹಬ್ಬು ಅವರು ತಮ್ಮ ಪ್ರವಚನದಲ್ಲಿ ಹೇಳಿದರು. ಜೊತೆ ಅನುವಾದಕರಾದ ಶ್ರೀ ಮೋಹನ್ ಹಬ್ಬು, ಅರುಣ ಕುಮಾರ ಹಬ್ಬು, ರಾಮಚಂದ್ರ ಹಬ್ಬು,ಶ್ರೀ ಅನೀಶ್ ಬೋಧ್, ಶ್ರೀ ಎನ್ ನರಸಿಂಹಯ್ಯ, ಮುನಿಯಾಲ್ ಗಣೇಶ್ ಶೆಣೈ ಮುಂತಾದವರನ್ನು ಸನ್ಮಾನಿಸಲಾಯಿತು. ಶ್ರೀ ಜಯರಾಜೇ ಅರಸ್, ಹಿರಿಯ ಐಏಸ್ ಅಧಿಕಾರಿಗಳು, ಓಮ್ಬುಡ್ಸ್ನ್, ಕೆ. ಇ. ಆರ್ ಸಿ. ಬೆಂಗಳೂರು ಇವರು ಮುಖ್ಯ ಅತಿಥಿಗಳಾಗಿದ್ದರು. ಪೂಜ್ಯ ಆನಂದ ಭಂತೆ ಅವರು ಧಮ್ಮದೇಸನ ವನ್ನು ನೀಡಿದರು. ಈ ಕಾರ್ಯಕ್ರಮವನ್ನು ಪೂಜ್ಯ ಭಿಕ್ಕು ಸಂಘ, ಮಹಾ ಬೋಧಿ ಸೊಸೈಟಿ, ಬೆಂಗಳೂರು ಇವರು ಹಮ್ಮಿಕೊಂಡಿದ್ದರು. ಡಾ. ಬಿ ವಿ ರಾಜಾರಾಮ್ ಕಾರ್ಯಕ್ರಮವನ್ನು ನಿರ್ವಹಿಸಿದರು.