ಸುದ್ದಿ9 ಕೈಕಂಬ: ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಸಹ ಪ್ರಾದ್ಯಾಪಕಿ ಐರಿನ್ ವೇಗಸ್ ರವರು ಯೆನೆಪೋಯ ಮೆಡಿಕಲ್ ಕಾಲೇಜಿನ ಫೊರೆನ್ಸಿಕ್ ವಿಭಾಗದ ಫ್ರೊಪೆಸರ್ ಹಾಗೂ ಮುಖ್ಯಸ್ಥೆ ಮತ್ತು ಸೆಂಟರ್ ಫಾರ್ ಎಥಿಕ್ಸ್ನ ನಿರ್ದೇಶಕರಾದ ಡಾ. ವೀಣಾ ವಾಸ್ವಾನಿಯವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಮಂಗಳೂರು ತಾಲೂಕಿನಲ್ಲಿ ತಾಯಿಯಂದಿರು ತಮ್ಮ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಋತುಸ್ರಾವದ ಕುರಿತು ಯಾವ ರೀತಿಯಲ್ಲಿ ವ್ಯವಹರಿಸುತ್ತಾರೆ’ ಎನ್ನುವ ವಿಷಯದ ಕುರಿತು ಕೈಗೊಂಡ ಸಂಶೋಧನಾ ಮಹಾಪ್ರಬಂಧಕ್ಕೆ ಯೆನೆಪೋಯ ವಿಶ್ವವಿದ್ಯಾನಿಲಯವು ಪಿಎಚ್ಡಿ ಪದವಿ ನೀಡಿದೆ.
ಇವರು ಮಂಗಳೂರು ತಾಲೂಕಿನ ಕೈಕಂಬದಲ್ಲಿರುವ ಕರ್ನಾಟಕ ಸರ್ಕಾರದ 2013 ನೆ ಸಾಲಿನ ಪರಿಸರ ಪ್ರಶಸ್ತಿ ಪುರಸ್ಕ್ರತ ದಿಶಾ ಟ್ರಸ್ಟ್ನ ಕಾರ್ಯ ನಿರ್ವಾಹಕ ಟ್ರಸ್ಟಿಯಾಗಿರುತ್ತಾರೆ.