ಬಂಟ್ವಾಳ : ಜೋರ್ಡಾನ್ ದೇಶದ ಅಬ್ದಾಲಿಯಲ್ಲಿ ಕಳೆದ ಆ 5 ರಂದು ನಡೆದ ಲಿಫ್ಟ್ ದುರಂತದಲ್ಲಿ ಸಾವನ್ನಪ್ಪಿದ ಕಳ್ಳಿಗೆ ಗ್ರಾಮದ ಪಚ್ಚಿನಡ್ಕ-ವಿರಾಜೆ ನಿವಾಸಿ ನೋವೆಲ್ ಫ್ರೆಡ್ ಕ್ರಾಸ್ತ (26) ಅವರ ಮೃತದೇಹವನ್ನು ಶನಿವಾರ ತವರಿಗೆ ತರಲಾಗಿದ್ದು, ಮೊಡಂಕಾಪು ಚರ್ಚ್ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
15 Aug Modankapಜೋರ್ಡಾನ್ ದೇಶದ ಅಬ್ದಾಲಿಯಲ್ಲಿ ಎ ಸಿ ಮೆಕ್ಯಾನಿಕ್ ಉದ್ಯೋಗಿಯಾಗಿದ್ದ ನೋವೆಲ್ ಫ್ರೆಡ್ ಕ್ರಾಸ್ತ ಅವರು ಆ 5 ರಂದು ಬಹು ಮಹಡಿ ಕಟ್ಟಡವೊಂದರ ಕಿಟಕಿ ಅಳವಡಿಕೆಯ ಕಾಮಗಾರಿ ನಡೆಸುತ್ತಿದ್ದ ವೇಳೆ ಅಲ್ಲೇ ನಿಂತಿದ್ದರು ಎನ್ನಲಾಗಿದೆ. ಈ ವೇಳೆ ಲಿಫ್ಟ್‍ನಲ್ಲಿ ಉಂಟಾದ ದೋಷದಿಂದ ಸೊಂಟಕ್ಕೆ ಅಳವಡಿಸಿದ್ದ ಬೆಲ್ಟ್ ತುಂಡಾಗಿ ಕೆಳಕ್ಕೆ ಬಿದ್ದು, ನೋವೆಲ್ ಹಾಗೂ ಇನ್ನೋರ್ವ ಕಾರ್ಮಿಕ ಜೋರ್ಡಾನ್ ಪ್ರಜೆ ಸ್ಥಳದಲ್ಲೇ ಮೃತಪಟ್ಟಿದ್ದರು.
ಕಳೆದ ನಾಲ್ಕು ವರ್ಷಗಳಿಂದ ದುಬೈ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಇವರನ್ನು ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಕಂಪೆನಿ ಜೋರ್ಡಾನ್ ದೇಶಕ್ಕೆ ವರ್ಗಾವಣೆ ನೀಡಿತ್ತು. ಮೃತರು ಅವಿವಾಹಿತರಾಗಿದ್ದು, ತಂದೆ ಫ್ರಾನ್ಸಿಸ್ ಕ್ರಾಸ್ತ, ತಾಯಿ ತೆರೆಸಾ ಕ್ರಾಸ್ತ, ಸಹೋದರಿ ಪ್ರಿನ್ಸಿಕಾ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *