ಕೈಕಂಬ:ಹಳ್ಳಿಗಳಲ್ಲಿ ವಾಸವಾಗಿರುವ ಮಹಿಳೆಯರು ಮನೆಯಲ್ಲಿ ಕುಳಿತುಕೊಂಡು ಸ್ವ ಉದ್ಯೋಗವನ್ನು ಮಾಡಿ ಅದನ್ನು ಲಾಭಾದಯಕವಾಗಿಸಲು ತೊಡಗಿಸಬೇಕು. ಎಲ್ಲ ಮಹಿಳೆಯರು ಸಂಘದ ಮೂಲಕ ಒಟ್ಟಿಗೆ ಬೆರೆತು ಎಲ್ಲಾ ಚಟುವಟಿಕೆಗಳಲ್ಲಿ ಉತ್ಸಾಹದಾಯಕವಾಗಿ ಭಾಗವಹಿಸಬೇಕು ಹಾಗೇ ಮಹಿಳೆ ದೌರ್ಜನ್ಯದ ಬಗ್ಗೆ ಸುರಕ್ಷತಾ ಮುಂಜಾಗ್ರತ ಕ್ರಮವನ್ನು ಸಂಪನ್ಮೂಲ ವ್ಯಕ್ತಿಯಾದ ವಿಲಿಯಂ ಸ್ಯಾಮುವೆಲ್ ಪ್ರಜ್ಞಾ ಸಲಹಾಕೇಂದ್ರ ಕಂಕನಾಡಿ ಈ ಸಂಸ್ಥೆಯ ಈಆರ್‍ಡಬ್ಲ್ಯೂ ಯೋಜನೆಯ ಅಡಿಯಲ್ಲಿ ಕೈಕಂಬ ವಲಯ ವತಿಯಿಂದ ಇತ್ತಿಚೆಗೆ ನಡೆದ ಸ್ವಸಹಾಯ ಸಂಘಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾಹಿತಿಯನ್ನು ನೀಡಿದರು.
12vp ganjimata sammilana karyakramaಹಾಗೂ ಪಿನಾಯಿಲ್ ತಯಾರಿಕೆ ವಿಧಾನವನ್ನು ಪ್ರಾತ್ಯಕ್ಷತೆ ಮೂಲಕ ವಿವರಿಸಿದರು. ಈ ಸಂದರ್ಭದಲ್ಲಿ ಯೋಜನೆಯ ಮೇಲ್ವಿಚಾರಕಿ ರೇಶ್ಮಾ, ವಲಯ ಸಂಯೋಜಕರಾದ ಸಾತ್ವಿಕ ಮತ್ತು ವಲಯ ಕಾರ್ಯಕರ್ತರಾದ ಪಾಲಾಕ್ಷಿ, ಸೀತುಲಕ್ಷ್ಮೀ ಉಪಸ್ಥಿತರಿದ್ದರು.ಸಂಘದ ಸದಸ್ಯರಾದ ಪದ್ಮಲತ ಸ್ವಾಗತಿಸಿ, ಸುಮಿತ್ರ ವಂದಿಸಿದರು.

By suddi9

Leave a Reply

Your email address will not be published. Required fields are marked *