ಕೈಕಂಬ: ಪ್ರಜ್ಞಾ ಸಲಹಾಕೇಂದ್ರ ಕಂಕನಾಡಿ ಈ ಸಂಸ್ಥೆಯ ಈಆರ್‍ಡಬ್ಲ್ಯೂಸಿ ಯೋಜನೆಯ ಅಡಿಯಲ್ಲಿ ಕೈಕಂಬ ವಲಯ ವತಿಯಿಂದ ಸ್ವಸಹಾಯ ಸಂಘಗಳ ಸಮ್ಮಿಲನ ಕಾರ್ಯಕ್ರಮ ಗರಡಿ ಎಂಬಲ್ಲಿ ನಡೆಯಿತು.
12vp edapadav sammilana karyakrama
ಸಂಘಪರಿವಾರಗಳಲ್ಲಿ ಮಹಿಳೆಯರು ಭಾಗವಹಿಸುತ್ತಿರುವುದು ಹಾಗೂ ಸಂಘದ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸ್ವ ಅಭಿವೃದ್ಧಿ ಹೊಂದಲು ಕಾರಣವಾಗುತ್ತದೆ ಮತ್ತು ಮಹಿಳೆಯರಿಗೆ ಉಂಟಾಗುತ್ತಿರುವ ಶೋಷಣೆ, ದೌರ್ಜನ್ಯ ಇವೆಲ್ಲದರ ಮುಂಜಾಗ್ರತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಆರ್‍ಡಬ್ಲ್ಯೂಸಿ ಯೋಜನೆಯ ಸಂಯೋಜಕರಾದ ವಿಲಿರ್ಯ ಸ್ಯಾಮುವೆಲ್ ನೀಡಿದರು. ಮತ್ತು ಮನೆಯಲ್ಲೆ ಸ್ವಉದ್ಯೋಗವಾಗಿ ಮಾಡಲು ಪಿನಾಯಿಲ್ ತಯಾರಿಕೆ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ವಿವರಿದರು.ಸಂಘದ ಸದಸ್ಯರಿಗೆಲ್ಲ ಆಟೋಟ ಚಟುವಟಿಕೆಗಳನ್ನು ಏರ್ಪಾಡಿಸಲಾಗಿತ್ತು. ಚಟುವಟಿಕೆಯಲ್ಲಿ ಮೊದಲಸ್ಥಾನ ಗಳಿಸಿದ ಸ್ಪರ್ಧಿಗಳಿಗೆ ಬಹುಮಾನವನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಯೋಜನೆ ಮೇಲ್ಚಿಚಾರಕಿ ರೇಶ್ಮಾ, ವಲಯ ಸಂಯೋಜಕರದ ಸಾತ್ವಿಕ್ ಮತ್ತು ವಲಯ ಕಾರ್ಯಕರ್ತರಾದ ಪಾಲಾಕ್ಷಿ, ನೀತುಲಕ್ಷ್ಮೀ ಉಪಸ್ಥಿತರಿದ್ದರು.ಸಂಘದ ಸದಸ್ಯೆ ಶೀಲಾ ಸ್ವಾಗತಿಸಿದರು. ಮಾಲತಿ ವಂದಿಸಿದರು.

By suddi9

Leave a Reply

Your email address will not be published. Required fields are marked *